ಚುನಾವಣೋತ್ತರ ಸಮೀಕ್ಷೆ: ತ್ರಿಪುರಾ, ನಾಗಾಲ್ಯಾಂಡ್​ನಲ್ಲಿ ಬಿಜೆಪಿ, ಮೇಘಾಲಯ ಅತಂತ್ರ

BJP
Published on

ನವದೆಹಲಿ: ಚುನಾವಣೆ ಎದುರಿಸಿದ ಈಶಾನ್ಯದ ಮೂರು ರಾಜ್ಯಗಳ ಪೈಕಿ ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್​ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಕೆಲ ಸಮೀಕ್ಷೆಗಳು ಹೇಳಿವೆ.

ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಮತದಾನವು ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ನಾಗಾಲ್ಯಾಂಡ್​ನಲ್ಲಿ ಶೇ.84 ಮತ್ತು ಮೇಘಾಲಯದಲ್ಲಿ ಶೇ. 77 ಮತದಾನ ಆಗಿದೆ.

ತ್ರಿಪುರಾ ವಿಧಾನಸಭೆ ಚುನಾವಣೆಗೆ ಫೆ.16ರಂದು ಮತದಾನ ನಡೆದಿತ್ತು. ಮೂರೂ ರಾಜ್ಯಗಳ ಫಲಿತಾಂಶ ಮಾ.2ಕ್ಕೆ ಹೊರಬೀಳಲಿದೆ. ಈ ರಾಜ್ಯಗಳ ವಿಧಾನಸಭೆಯ ಬಲ ತಲಾ 60 ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net