ಬಿಜೆಪಿಯಿಂದ ಕಲಾಪ ಬಾಯ್ಕಟ್?

VidhanaSoudha
Published on

ಬೆಂಗಳೂರು: ಹತ್ತು ಶಾಸಕರನ್ನು ಅಮಾನತು ಮಾಡಿರುವುದರ ವಿರುದ್ಧ ಕೆರಳಿರುವ ಬಿಜೆಪಿ ಗುರುವಾರ ಬೆಳಗ್ಗೆ ರಾಜಭವನಕ್ಕೆ ತೆರಳಿ ದೂರು ಸಲ್ಲಿಸಲಿದೆ.
ಸ್ಪೀಕರ್ ವರ್ತನೆ, ಸರ್ಕಾರದ ನಡೆ ಕುರಿತು ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಲಿದ್ದಾರೆ.
ಇದೇ ವೇಳೆ, ವಿಧಾನಸಭೆ ಅಧಿವೇಶನ ಮುಂದಿನ ಎರಡು ದಿನ ನಡೆಯಲಿದ್ದು ಅದನ್ನು ಬಹಿಷ್ಕರಿಸಬೇಕೆಂಬ ಚರ್ಚೆ ನಡೆದಿದ್ದು ಗುರುವಾರ ಬೆಳಗ್ಗೆ ನಿರ್ಧಾರ ಅಂತಿಮವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net