

ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 05ರಂದು ಮತದಾನ ನಡೆದಿದ್ದು, 08ರಂದು ಫಲಿತಾಂಶ ಪ್ರಕಟವಾಗಲಿದೆ. ಆಡಳಿತರೂಢ ಎಎಪಿ (AAP) ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಗುರಿಯನ್ನು ಹೊಂದಿದ್ದು, ಬಿಜೆಪಿ (BJP) 25 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಏರಲು ಪ್ರಯತ್ನಿಸುತ್ತಿದೆ. 15 ವರ್ಷಗಳ ಬಳಿಕ ಕಳೆದುಹೋದ ತನ್ನ ನೆಲೆಯನ್ನು ಮತ್ತೊಮ್ಮೆ ಕಂಡುಕೊಳ್ಳಲು ಕಾಂಗ್ರೆಸ್ (Congress) ಹೋರಾಡುತ್ತಿದ್ದು, ಅಂತಿಮವಾಗಿ ಫೆಬ್ರವರಿ 08ರಂದು ಫಲಿತಾಂಶ ಹೊರಬಿದ್ದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇನ್ನೂ ಮತದಾನ ಮುಗಿಯುತ್ತಿದ್ದಂತೆ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಟುಡೇಸ್ ಚಾಣಕ್ಯ, ಆಕ್ಸಿಸ್ ಮೈ ಇಂಡಿಯಾ, ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ವರದಿಗಳನ್ನು ಪ್ರಕಟಿಸಿವೆ. ಸದ್ಯ ಬಿಡುಗಡೆಯಾಗಿರುವ ಎಕ್ಸಿಟ್ ಪೋಲ್ ವರದಿಗಳಲ್ಲಿ ಬಿಜೆಪಿ (BJP) ರಾಷ್ಟ್ರರಾಜಧಾನಿಯ ಗದ್ದುಗೆ ಏರುತ್ತದೆ ಎಂದು ಭವಿಷ್ಯ ನುಡಿದಿದ್ದು, ಆಪ್ಗೆ ವಿರೋಧ ಪಕ್ಷದ ಸ್ಥಾನ ಖಾಯಂ ಎಂದು ಹೇಳಿವೆ. ಕಾಂಗ್ರೆಸ್ 2-3 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಬಿಡುಗಡೆಯಾಗಿರುವ ವರದಿಗಳಲ್ಲಿ ಬಿಜೆಪಿ 40ಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಿಸಲಿದೆ ಎಂದು ಹೇಳಿದ್ದು, ಆಡಳಿತರೂಢ ಎಎಪಿಯು 25-30 ಸ್ಥಾನ ಗೆಲ್ಲಲಿದ್ದು, ಕಾಂಗ್ರೆಸ್ 2ರಿಂದ 3 ಸ್ಥಾನ ಗೆಲ್ಲುತ್ತದೆ ಎಂದು ಪ್ರಕಟವಾಗಿರುಚ ಎಕ್ಸಿಟ್ಪೋಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತಿಮವಾಗಿ ಫೆಬ್ರವರಿ 08ರಂದು ಫಲಿತಾಂಶ ಪ್ರಕಟವಾದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
25 ವರ್ಷಗಳ ಬಳಿಕ ಅಧಿಕಾರಕ್ಕೇರಲು ಪಣ ತೊಟ್ಟಿರುವ ಬಿಜೆಪಿ (BJP) ಪ್ರಮುಖವಾಗಿ ಆಪ್ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತಯಾಚಿಸಿದೆ. ತನ್ನ ಓಟವನ್ನು ನಾಲ್ಕನೇ ಅವಧಿಗೆ ವಿಸ್ತರಿಸುವ ನಿಟ್ಟಿನಲ್ಲಿ ಆಪ್ ಹಿಂದೆಗಿಂತಲೂ ಈ ಬಾರಿ ಹೆಚ್ಚು ಉಚಿತ ಯೋಜನೆಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಕರ್ನಾಟಕದ ಮಾದರಿಯಲ್ಲೇ ಗ್ಯಾರಂಟಿಗಳನ್ನು ಘೋಷಿಸಿ ಮತಯಾಚಿಸಿದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.