ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 4 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭವನ್ನು ಕಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ನಾಯಕ ಜೋಸ್ ಬಟ್ಲರ್ (52 ರನ್, 67 ಎಸೆತ, 4 ಬೌಂಡರಿ) ಜೇಕಬ್ ಬೆಥೆಲ್ (51 ರನ್, 64 ಎಸೆತ, 3 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 47.4 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ (43 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಬೆನ್ ಡಕೆಟ್ (32 ರನ್, 29 ಎಸೆತ, 6 ಬೌಂಡರಿ) 9 ಓವರ್ನ ಮುಕ್ತಾಯಕ್ಕೆ 73 ರನ್ ಜತೆಯಾಟವಾಡಿ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿತ್ತು. ಈ ಸಮಯದಲ್ಲಿ ಕೈಚಳಕ ತೋರಿದ ಟೀಮ್ ಇಂಡಿಯಾದ (Team India) ವೇಗಿಗಳು ಆಂಗ್ಲರಿಗೆ ಡಗೌಟ್ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಹರ್ಷಿತ್ ರಾಣಾ, ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
A solid win in the bag for #TeamIndia! 💪 💪
They beat England by 4⃣ wickets in Nagpur & take 1-0 lead in the ODI series! 👏 👏
Scorecard ▶️ https://t.co/lWBc7oPRcd#INDvENG | @IDFCFIRSTBank pic.twitter.com/lJkHoih56n
— BCCI (@BCCI) February 6, 2025
ಇನ್ನೂ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ (Team India) ಪರ ಶುಭಮನ್ ಗಿಲ್ (87 ರನ್, 96 ಎಸೆತ, 14 ಬೌಂಡರಿ), ಶ್ರೇಯಸ್ ಅಯ್ಯರ್ (59 ರನ್, 36 ಎಸೆತ, 9 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (52 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ ತಂಡವು 6 ವಿಕೆಟ್ ನಷ್ಟಕ್ಕೆ ಗುರಿಯನ್ನು 38.4 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ (England) ಪರ ಜೋಫ್ರಾ ಆರ್ಚರ್ (7-1-39-1), ಸಾಕಿಬ್ ಮಹಮೂದ್ (6.4-0-47-2), ಬ್ರೈಡಾನ್ ಕಾರ್ಸೆ (5-0-52-0), ಆದಿಲ್ ರಶೀದ್ (10-1-49-2), ಜೇಕಬ್ ಬೆಥೆಲ್ (3-0-18-1), ಲಿಯಾಮ್ ಲಿವಿಂಗ್ಸ್ಟನ್ (5-0-28-0), ಜೋ ರೂಟ್ (2-0-10-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಮದುವೆಯಾದ ಕೆಲವೇ ಕ್ಷಣಗಳಲ್ಲಿ ವಧುವಿನ ಕಪಾಳಕ್ಕೆ ಹೊಡೆದ ವರ; Video Viral ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿ ಅಮಾನತು
ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad