ಮುಸ್ಲಿಮರಿಗೆ ನೀಡಲಾಗುವ ಉಡುಗೊರೆ ಪ್ಯಾಕ್‌ಗಳಲ್ಲಿ ಆಹಾರ ಪದಾರ್ಥಗಳು, ಹೊಸ ಬಟ್ಟೆಗಳು, ಖರ್ಜೂರ, ಒಣ ಹಣ್ಣುಗಳು ಮತ್ತು ಸಕ್ಕರೆ ಮುಂತಾದ ವಸ್ತುಗಳು ಸೇರಿವೆ. ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಕುರ್ತಾ ಪೈಜಾಮಾ ನೀಡಲಾಗುತ್ತದೆ. ಪ್ರತಿ ಕಿಟ್‌ನ ಬೆಲೆ 500 ರೂಪಾಯಿಂದ ರೂ. 600 ರವರೆಗೆ. ಫಲಾನುಭವಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕರಿಗೆ ವಹಿಸಲಾಗಿದೆ. ಮಸೀದಿ ಸಮಿತಿಯು 100 ಬಡ ಮುಸ್ಲಿಮರನ್ನು ಆಯ್ಕೆ ಮಾಡಿ ಆಯೋಜಕರಿಗೆ ಪಟ್ಟಿಯನ್ನು ನೀಡುತ್ತದೆ.