ಪ್ರಿಯಾಂಕಾ ಗಾಂಧಿಯೂ ಇಲ್ಲ, ಅವರು ಕೊಟ್ಟ ಗ್ಯಾರಂಟಿಯೂ ಇಲ್ಲ!: ರಾಜ್ಯ ಬಿಜೆಪಿ

bjp vs congress
Published on

ಬೆಂಗಳೂರು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಾಯಕಿ(Congress Leader) ಪ್ರಿಯಾಂಕಾ ಗಾಂಧಿ(Priyanka Gandhi) ನೀಡಿದ ಭರವಸೆಗಳನ್ನು ಉಲ್ಲೇಖಿಸಿ ಇದೀಗ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ(BJP), "ಚುನಾವಣಾ ಪೂರ್ವದಲ್ಲಿ ಪ್ರಿಯಾಂಕಾ ಗಾಂಧಿ ಅವರು ಬಂದರು ಸಾಲು ಸಾಲು ಸುಳ್ಳು ಹೇಳಿದರು, ಅಂಗನವಾಡಿ ಕಾರ್ಯಕರ್ತೆಯರ ಕನಸಿನ ಮೇಲೆ ಆಶಾಗೋಪುರ ಕಟ್ಟಿದರು! ಚುನಾವಣೆ ಮುಗಿಯಿತು, ಇದೀಗ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಯಾವ ಮಾತೂ ಕಾಂಗ್ರೆಸ್‌ ಆಡುತ್ತಿಲ್ಲ" ಎಂದು ಟ್ವೀಟ್(Tweet) ಮಾಡಿದೆ.

"ಪ್ರಿಯಾಂಕಾ ಗಾಂಧಿಯೂ ಇಲ್ಲ, ಅವರು ಕೊಟ್ಟ ಗ್ಯಾರಂಟಿಯೂ ಇಲ್ಲ! ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲೇಬೇಕು, ಅವರ ಪರವಾಗಿ ಬಿಜೆಪಿ ನಿಲ್ಲಲಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ" ಎಂದು ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ(State BJP) ಟ್ವೀಟ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net