ಪಶ್ಚಿಮ ಬಂಗಾಳದ ಅಸನ್​ಸೋಲ್​ನಲ್ಲಿ ಬಿಜೆಪಿ ಕಚೇರಿಗೆ ಬೆಂಕಿ: ಟಿಎಂಸಿ ಕಾರ್ಯಕರ್ತರ ದಾಳಿ ಆರೋಪ

bjp-office Asansol fire 13 JAN 20
Published on

ಕೋಲ್ಕತ: ಪಶ್ಚಿಮ ಬಂಗಾಳದ ಅಸನ್​ಸೋಲ್​ನ ಸಲಾನ್​ಪುರ ಗ್ರಾಮದಲ್ಲಿರುವ ಬಿಜೆಪಿ ಕಚೇರಿ ಭಾನುವಾರ ತಡರಾತ್ರಿ ಸುಟ್ಟು ಭಸ್ಮವಾಗಿದೆ.

ಬಿಜೆಪಿ ಕಚೇರಿ ಬೆಂಕಿಗಾಹುತಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಆರೋಪಿಸಿದೆ. ಪೊಲೀಸರು ಘಟನೆ ಬಗ್ಗೆ ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಸನ್​ಸೋಲ್​ನಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಎ ಪರ ಜಾಗೃತಿ ಜಾಥಾ ನಡೆಸಲು ಮುಂದಾಗಿದ್ದ ವೇಳೆ, ಪೊಲೀಸರು ಅವರನ್ನು ತಡೆದಿದ್ದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಸಂಘರ್ಷದ ಪರಿಣಾಮ ಇದು ಹೇಳಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net