ದೇಶದಲ್ಲಿ ಕಾನೂನಿಗೆ ಗೌರವ ನೀಡಿ; ಕುಲಕಣಿರ್

22-RNR-04
Published on

ಹಾವೇರಿ: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠದ ಸಭೆ ಶನಿವಾರ ನಡೆಯಿತು.
ರಾಜ್ಯ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ಲಕ್ಷ$್ಮಣ ಕುಲಕಣಿರ್ ಮಾತನಾಡಿ, ದೇಶದಲ್ಲಿ ಕಾನೂನಿಗೆ ಇರುವ ಗೌರವನ್ನು ಹೆಚ್ಚಿಸುವ ಹಾಗೂ ಕಾರ್ಯಕರ್ತರ ಮನೊದೈರ್ಯವನ್ನು ತುಂಬಿ ರಾಜಕೀಯ ಕಾನೂನು ಹೋರಾಟದಲ್ಲಿ ನಿಮ್ಮೊಂದಿಗೆ ಇರುತ್ತೇನೆ ಎಂದರು.
ರಾಜ್ಯ ಕಾನೂನು ಪ್ರಕೋಷ್ಠದ ಸಮಿತಿ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಪೂಜಾ ಸವದತ್ತಿ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಕಾನೂನುಗಳು ಮಾರ್ಪಾಡು ಆಗುತ್ತಿವೆ. ಅದರ ಅರಿವನ್ನು ಸಾಮಾನ್ಯರಲ್ಲಿ ಮುಡಿಸುವುದು ಹಾಗೂ ಭಾರತೀಯ ಜನತಾ ಪಾಟಿರ್ ಸಂಘಟಿತ ಕಾರ್ಯದಲ್ಲಿ ಭಾಗಿಯಾಗಿರುವುದು ನಮ್ಮಲ್ಲರ ಕರ್ತವ್ಯಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿರ್, ಜಿಲ್ಲಾ ಪ್ರಕೋಷ್ಠಗಳ ಉಸ್ತುವಾರಿ ನಂಜುಂಡೇಶ ಕಳ್ಳೇರ ಮಾತನಾಡಿ, ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಎಲ್ಲರ ಸಹಕಾರದೊಂದಿಗೆ ಕಾನೂನು ಪ್ರಕೋಷ್ಠವನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು.
ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಎನ್​.ಎಸ್​. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net