ಬಿಜೆಪಿ ಕಚೇರಿಗಳಿಗೆ ಸುಸಜ್ಜಿತ ಭವನ | ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಿಂದ ಇಂದು ಶಿಲಾನ್ಯಾಸ

BJP
Published on

ಬೆಂಗಳೂರು: ರಾಜ್ಯದ 8 ಸಂಘಟನಾತ್ಮಕ ಜಿಲ್ಲೆಗಳು ಹಾಗೂ 1 ವಿಧಾನಸಭಾ ಕ್ಷೇತ್ರದಲ್ಲಿ ನಿರ್ವಣವಾಗುತ್ತಿರುವ ಬಿಜೆಪಿ ಜಿಲ್ಲಾ ಮತ್ತು ಮಂಡಲ ಕಾರ್ಯಾಲಯ ಭವನಗಳ ಭೂಮಿಪೂಜೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಶುಕ್ರವಾರ ವರ್ಚುವಲ್ ರ‍್ಯಾಲಿ ಮೂಲಕ ಏಕ ಕಾಲಕ್ಕೆ ನೆರವೇರಿಸಲಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹಾಗೂ ಜಿಲ್ಲಾ ಕಚೇರಿ ಭವನ ನಿರ್ಮಾಣ ರಾಜ್ಯ ಸಮಿತಿ ಸಂಚಾಲಕ ಡಾ.ಮಾ.ನಾಗರಾಜ್ ಈ ವಿಷಯ ತಿಳಿಸಿದ್ದು ಶುಕ್ರವಾರ ಬೆಳಗ್ಗೆ 7.45 ರಿಂದ 8.15ರೊಳಗೆ ಪೂಜೆ, ನಂತರ 10.50 ರಿಂದ 12.20 ರವರೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಈ ಸಮಾರಂಭದಲ್ಲಿ ದೆಹಲಿಯಿಂದ ಪಕ್ಷದ ರಾಜ್ಯ ಉಸ್ತುವಾರಿ ಮುರಳಿಧರ ರಾವ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮಅಧಿಕೃತ ನಿವಾಸ ಕಾವೇರಿಯಿಂದ ವರ್ಚುವಲ್ ರ‍್ಯಾಲಿ ಮೂಲಕ ಪಾಲ್ಗೊಳ್ಳಲಿದ್ದಾರೆ.

ಪಕ್ಷದ ರಾಜ್ಯ ಕಾರ್ಯಾಲಯದಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸಮಾರಂಭಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸುರಾನಾ ಹೇಳಿದರು.

ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಾಮರಾಜನಗರ ಮತ್ತು ಕೋಲಾರ ಜಿಲ್ಲಾ ಕಚೇರಿ ಭವನಗಳು ಹಾಗೂ ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರ ಕಾರ್ಯಾಲಯ ಭವನ ನಿರ್ಮಾಣ ಮಾಡಲಾಗುವುದು 1.25-1.75 ಕೋಟಿ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ವಿುಸಲಾಗುತ್ತದೆ. 14 ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಪ್ರತಿಯೊಂದು ಜಿಲ್ಲಾ ಭವನ 12 ಸಾವಿರದಿಂದ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ವಿುಸಲಾಗುತ್ತಿದೆ ಅದರಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ವರ್ಚುವಲ್ ರ‍್ಯಾಲಿ ಮೂಲಕ ಸಂವಹನ ಸಂವಾದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ, ಕಾರ್ಯಕರ್ತರಿಗೆ ಪ್ರ ಶಿಕ್ಷಣಕ್ಕೆ ಸಭಾಂಗಣ, ಮಾಧ್ಯಮ-ಸಂವಾದ ಸಭಾಂಗಣ, ಸಾರ್ವಜನಿಕ ಅಹವಾಲು ಆಲಿಸಲು ಉಪಯುಕ್ತವಾಗುವಂತೆ ಜಿಲ್ಲಾ ಸಂಸದರು, ಶಾಸಕರಿಗೆ ಪ್ರತ್ಯೇಕ ವಾದ ಸಂವಾದ ಕೊಠಡಿ, ಸಂಘಟನೆಯ ಕಾರ್ಯಕರ್ತರಿಗೆ ವಸತಿ ವ್ಯವಸ್ಥೆ ಒಳಗೊಂಡಿದೆ ಎಂದು ಮಾ.ನಾಗರಾಜ್ ವಿವರಿಸಿದರು.

ಸ್ವಂತ ಕಟ್ಟಡ ಅಭಿಯಾನಕ್ಕೆ ಅಮಿತ್ ಶಾ ಪ್ರೋತ್ಸಾಹ: ಪಕ್ಷದ ಕಾರ್ಯಾಲಯಗಳು ಸ್ವಂತ ಸುಸಜ್ಜಿತ ಕಟ್ಟಡ ಹೊಂದಿರಬೇಕೆಂಬ ಅಭಿಯಾನಕ್ಕೆ ನಿಕಟಪೂರ್ವ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪೋ›ತ್ಸಾಹಿಸಿದ್ದರು. ರಾಜ್ಯದಲ್ಲಿರುವ ಪಕ್ಷದ 37 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಹೊಂದಿವೆ. ಧಾರವಾಡ ಗ್ರಾಮಾಂತರ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಗಳಿಗೆ ಹುಬ್ಬಳ್ಳಿಯಲ್ಲಿ ಒಂದೇ ಕಡೆ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

14 ಜಿಲ್ಲೆಗಳಲ್ಲಿ ಗೊತ್ತುಪಡಿಸಿದ ನಿವೇಶನಗಳ ಪೈಕಿ 8 ಜಿಲ್ಲೆಗಳ ಭವನ ನಿರ್ವಣಕ್ಕೆ ಇದೀಗ ಶಿಲಾನ್ಯಾಸ ನೆರವೇರುತ್ತಿದೆ. ಬಾಕಿ 10 ಜಿಲ್ಲೆಗಳಲ್ಲಿ ನಿವೇಶನ ಗುರುತಿಸಬೇಕಾಗಿದೆ ಎಂದು ಡಾ.ಮಾ.ನಾಗರಾಜ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net