More

    ಕಿಡ್ನಿ ಸಮಸ್ಯೆ ಇರುವ ಸರ್ಕಾರಿ ನೌಕರರಿಗೆ ಶುಭ ಸುದ್ದಿ…

    ಬೆಂಗಳೂರು: ಕಿಡ್ನಿ ರೋಗದಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಡಯಾಲಿಸಿಸ್ ಮಾಡಿಸಬೇಕಾದ ದಿನ ಕಿಡ್ನಿ ರೋಗಿ ಸರ್ಕಾರಿ ನೌಕರರಿಗೆ ಒಂದು ದಿನದ ವಿಶೇಷ ಸಾಮಾನ್ಯ ರಜೆ ನೀಡಬೇಕೆಂಬ ಸರ್ಕಾರಿ ನೌಕರರ ಸಂಘದ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ.

    ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ಡಯಾಲಿಸಿಸ್​ಗೆ ಒಳಪಡುವುದು ಅನಿವಾರ್ಯ, ಡಯಾಲಿಸಿಸ್ ಮಾಡಿಕೊಂಡ ದಿನದಂದು ಬಳಲಿರುತ್ತಾರೆ. ಹೀಗಾಗಿ ಕಚೇರಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ ಕಾರಣ ಆ ದಿನವನ್ನು ವಿಶೇಷ ಸಾಮಾನ್ಯ ರಜೆ ಎಂದು ಪರಿಗಣಿಸಬೇಕೆಂದು ಸಂಘದ ಅಧ್ಯಕ್ಷರು ಸರ್ಕಾರವನ್ನು ಕೋರಿ ಪತ್ರ ಬರೆದಿದ್ದರು. ಇದೀಗ ಕೋರಿಕೆಯನ್ನು ಮಾನ್ಯ ಮಾಡಿದ ಸರ್ಕಾರ ಈ ಸಂಬಂಧ ಮಹತ್ವದ ಆದೇಶವನ್ನೇ ಹೊರಡಿಸಿದೆ.

    ಇದನ್ನೂ ಓದಿ: ಬಿಎಸ್​ವೈ ಹೆಸರಿನ ನಕಲಿ ಟ್ವಿಟ್ಟರ್ ಖಾತೆ ವಿರುದ್ಧ ಪ್ರಕರಣ ದಾಖಲು

    ಕಿಡ್ನಿ ಸಮಸ್ಯೆಯಿಂದ ನಿರಂತರವಾಗಿ ಡಯಾಲಿಸಿಸ್​ಗೆ ಒಳಗಾಗುತ್ತಿರುವ ನೌಕರರು ಸಂಬಧಪಟ್ಟ ವೈದ್ಯಕೀಯ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಹಾಜರುಪಡಿಸಿ ವಿಶೇಷ ಸಾಮಾನ್ಯ ರಜೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    ಸಾವಿರಾರು ಸರ್ಕಾರಿ ನೌಕರರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವವರೂ ಇದ್ದಾರೆ. ಇಂಥವರಿಗೆ ರಜೆ ಇಲ್ಲದೇ, ಕಚೇರಿ ಕೆಲಸದಿಂದಲೂ ದೂರ ಇರಲಾರದೆ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಸಂಘವು ಸರ್ಕಾರವನ್ನು ಕೋರಿತ್ತು. ನಮ್ಮ ಮನವಿಗೆ ಸ್ಪಂದನೆ ಸಿಕ್ಕಿದೆ.
    ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

    ಬಿಎಸ್​ವೈ ಸಚಿವ ಸಂಪುಟ ವಿಸ್ತರಣೆ ಇನ್ನು ಶೀಘ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts