

ಬೆಂಗಳೂರು: ಬಿಜೆಪಿಯ ಯುವ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇದು ವೈಯಕ್ತಿಕ ಭೇಟಿಯೋ? ಅಥವಾ ರಾಜಕೀಯ ಭೇಟಿಯೋ ಎಂಬುದು ತಿಳಿದುಬಂದಿಲ್ಲ. ಅಲ್ಲದೆ, ಭೇಟಿ ಮಾಡಿದ ಸ್ಥಳದ ಬಗ್ಗೆಯು ಮಾಹಿತಿ ನೀಡಿಲ್ಲ. ಆದರೆ, ಭೇಟಿಯಾಗಿರುವುದನ್ನು ಮಾತ್ರ ಸಂಸದ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಖಚಿತ ಪಡಿಸಿದ್ದಾರೆ.
ಪವನ್ ಕಲ್ಯಾಣ್ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡು, ನನ್ನು ಕಾಲೇಜು ದಿನಗಳಲ್ಲಿ ಪವನ್ ಕಲ್ಯಾಣ್ ಅವರ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೆ. ಅಲ್ಲದೆ, ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಇಂದು ನನಗೆ ಮತ್ತು ತೇಜಸ್ವಿ ಸೂರ್ಯರಿಗೆ ಪವನ್ ಕಲ್ಯಾಣ್ರನ್ನು ಭೇಟಿ ಮಾಡಿ ಮಾತನಾಡುವ ಅವಕಾಶ ಲಭಿಸಿತು. ಧನ್ಯವಾದಗಳು ಪವನ್ ಕಲ್ಯಾಣ್ ಮತ್ತು ವಿಶ್ವ ಗಾರು ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.