

ಪುದುಚೆರಿ: ಇಲ್ಲಿನ ಬಿಜೆಪಿ ಶಾಸಕ ಹಾಗೂ ಬಿಜೆಪಿ ಘಟಕದ ಖಜಾಂಚಿ ಕೆ.ಜಿ.ಶಂಕರ್(70) ಭಾನುವಾರದಂದು ಹೃದಯಾಘಾತದಿಂದಾಗಿ ಮೃತರಾಗಿದ್ದಾರೆ. ಶಾಸಕರ ಸಾವಿಗೆ ಲೆಫ್ಟಿನೆಂಟ್ ಗವರ್ನರ್ ಸೇರಿ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಶಂಕರ್ ಅವರು ಕೇಂದ್ರಾಡಳಿತ ಪ್ರದೇಶದ ನಾಮನಿರ್ದೇಶಿತ ಶಾಸಕರಾಗಿದ್ದರು. ಇವರಿಗೆ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗಳಿದ್ದಾಳೆ. ಶನಿವಾರ ರಾತ್ರಿ ಮಲಗಿದ್ದ ಅವರಿಗೆ ಹೃದಯಘಾತವಾಗಿದ್ದು, ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿರುವುದಾಗಿ ಕುಟುಂಬ ತಿಳಿಸಿದೆ.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಮುಖ್ಯಮಂತ್ರಿ ವಿ ನಾರಾಯಣಸಾಮಿ, ವಿಧಾನಸಭೆ ಸ್ಪೀಕರ್ ವಿ.ಪಿ. ಶಿವಕೋಲುಂಡು, ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಮಿನಾಥನ್ ಮತ್ತು ವಿಧಾನಸಭೆ ಕಾರ್ಯದರ್ಶಿ ಆರ್ ಮುನುಸಾಮಿ ಮೃತರ ಅಂತಿಮ ದರ್ಶನ ಮಾಡಿ, ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)