

ರಾಣೆಬೆನ್ನೂರ: ಮೇರಿ ಮಿಟ್ಟಿ, ಮೇರಾ ದೇಶ ಕಾರ್ಯಕ್ರಮದಡಿ ದೇಶದ ಸ್ವಾತಂತ್ರೃ ಹೋರಾಟಗಾರರ ಸ್ಥಳದಿಂದ ಮಣ್ಣು ಸಂಗ್ರಹಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಗೆ ಪ್ರತೀಕವಾಗಿದೆ ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು.
ಬಿಜೆಪಿ ನಗರ ಘಟಕದ ವತಿಯಿಂದ ಗುರುವಾರ ನಗರದ ಸಂಗಮ್ ವೃತ್ತ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಮೇರಿ ಮಿಟ್ಟಿ, ಮೇರಾ ದೇಶ ಕಾರ್ಯಕ್ರಮದಡಿ ಮಣ್ಣು ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮೇರಿ ಮಿಟ್ಟಿ, ಮೇರಾ ದೇಶ ಕಾರ್ಯಕ್ರಮದಡಿ ದೇಶದ ಎಲ್ಲ ಸ್ವಾತಂತ್ರೃ ಹೋರಾಟಗಾರರ ಸ್ಥಳದಿಂದ ಮಣ್ಣನ್ನು ಶೇಖರಣೆ ಮಾಡಿ ತರಬೇಕು ಎಂದು ಕರೆ ಕೊಟ್ಟ ಹಿನ್ನೆಲೆ ಮಣ್ಣನ್ನು ಶೇಖರಣೆ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಇದೊಂದು ಶೇಷ್ಠವಾದಂತ ದೇಶಭಕ್ತಿ, ದೇಶ ಪ್ರೇಮದ ಕಾರ್ಯಕ್ರಮವಾಗಿದ್ದು ಗ್ರಾಮ, ನಗರ ಹಾಗೂ ತಾಲೂಕುಗಳಿಂದ ಜಿಲ್ಲೆ, ಅಲ್ಲಿಂದ ರಾಜ್ಯದ ಮೂಲಕ ದೆಹಲಿಗೆ ಕಳುಹಿಸಲಾಗುವುದು ಎಂದರು.
ಕಾರ್ಯಕ್ರಮದ ನಿಮಿತ್ತ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ವಕೀಲ ಕೆ. ಶಿವಲಿಂಗಪ್ಪ, ಡಾ. ಬಸವರಾಜ ಕೇಲಗಾರ, ಮಂಜುಳಾ ಹತ್ತಿ, ಗದಿಗೆಪ್ಪ ಹೊಟ್ಟಿಗೌಡ್ರ, ಎ.ಬಿ. ಪಾಟೀಲ, ಗಣೇಶ ಕುಂಬಾರ, ಚನ್ನಮ್ಮ ಗುರುಪಾದದೇವರಮಠ, ರಾಜು ಬಣಕಾರ, ಶಿವಕುಮಾರ ಹರಕನಾಳ, ಅಮೋಘ ಬದಾಮಿ ಮತ್ತಿತರರು ಉಪಸ್ಥಿತರಿದ್ದರು.