ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಬಿಜೆಪಿ ಸಭೆ ಸೀಮಿತ; ಅಧಿಕೃತ ಹೆಸರು ಪ್ರಕಟಿಸಲಿರುವ ಜೆ.ಪಿ.ನಡ್ಡಾ

IMG-20231117-WA0056
Published on

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಗೆ ಸಂಬಂಧ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಸೀಮಿತವಾಗಿರಲಿದೆ. ನಂತರ ಕೇಂದ್ರ ವೀಕ್ಷಕರಾಗಿ ಆಗಮಿಸಿರುವ ನಿರ್ಮಲಾ ಸೀತಾರಾಮನ್, ದುಶ್ಶಂತಕುಮಾರ್ ಗೌತಮ್ ನೀಡಲಿರುವ ವರದಿಯನ್ನು ಪರಿಗಣಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕೃತವಾಗಿ ಹೆಸರುಗಳನ್ನು ಪ್ರಕಟಿಸಲಿದ್ದಾರೆ.

ಸಭೆಗೆ ಮುನ್ನ ಮಾಜಿ ಸಚಿವ ಆರ್.ಅಶೋಕ್ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಇಂದು ರಾತ್ರಿಯೇ ಪ್ರತಿಪಕ್ಷ ನಾಯಕರ ಹೆಸರುಗಳನ್ನು ಘೋಷಿಸಲಿದ್ದಾರೆ. ಶಾಸಕರೆಲ್ಲರ ಅಭಿಪ್ರಾಯ ಪಡೆಯಲೆಂದು ಕೇಂದ್ರ ವೀಕ್ಷಕರು ಆಗಮಿಸಿದ್ದಾರೆ ಎಂದು ಹೇಳಿದರು. ಆದರೆ ಹೆಚ್ಚಿನ ವಿವರ, ತಾವೂ ಹುದ್ದೆಯ ಆಕಾಂಕ್ಷಿಯೆ ? ಎಂಬ ಬಗ್ಗೆ‌ ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಭೆಗೆ ಮುನ್ನವೇ ನಿರ್ಗಮನ‌ !

ನಗರದ ಸಂಂಗಿರಾಮನಗರದಲ್ಲಿರುವ ಖಾಸಗೊ ಹೋಟೆಲ್ ನಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಸಭೆ ಆರಂಭಕ್ಕೂ ಮುನ್ನ ಹೋಟೆಲ್ ಗೆ ಬಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ರಮೇಶ್ ಜಾರಕಿಹೊಳಿ ಹೋಟೆಲ್ ನಿಂದ ನಿರ್ಗಮಿಸಿದ್ದು ಶಾಸಕಾಂಗ ಸಭೆ ಆರಂಭವಾದರೂ ಮತ್ತೆ ವಾಪಸ್ಸಾಗಲಿಲ್ಲ,ಆದರೆ ಮತ್ತೊಬ್ಬ ಅಸಮಧಾನಿತ ಶಾಸಕ ಇನ್ನುಳಿದಂತೆ ದೆಹಲಿ ಪ್ರವಾಸದಲ್ಲಿರುವ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದು ಇತರ ನಾಯಕರು ಪಾಲ್ಗೊಂಡಿದ್ದಾರೆ.

ಶಾಸಕರ ತಂಡದೊಂದಿಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಭೆಗೆ ಆಗಮಿಸಿ ಗಮನಸೆಳೆದರೆ, ಬಸವರಾಜ ಬೊಮ್ಮಾಯಿ ಒಬ್ಬಂಟಿಯಾಗಿ ಬಂದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಒಟ್ಟಿಗೆ ಹೋಟೆಲ್ ಪ್ರವೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net