

ನೋಯ್ಡಾ: ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಗುಂಪೊಂದು ಬಿಜೆಪಿ ನಾಯಕನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಲಡ್ಪುರದ ಕಸ್ನಾ ಎಂಬ ಪ್ರದೇಶದಲ್ಲಿ ನೆಡೆದಿದೆ.
ಹಲ್ಲೆಗೊಳಗಾದ ಬಿಜೆಪಿ ನಾಯಕನನ್ನು ರಾಹುಲ್ ಪಂಡಿತ್ ಎಂದು ಗುರುತಿಸಲಾಗಿದ್ದು, ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲೇ ಈ ಗತಿಯಾದರೆ ಬೇರೆಡೆ ಇನ್ನೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಾಹುಲ್ ಪಂಡಿತ್ ಹಾಗೂ ಗುಂಪಿನ ನಡುವೆ ವಿಚಾರ ಒಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆ ಮಾಡಲಾಗಿದೆ. ಯಾವ ಕಾರಣಕ್ಕೆ ಗಲಾಟೆಯಾಯಿತು ಎಂದು ತಿಳಿದು ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಂಡಕಾರಿರುವ ನೆಟ್ಟಿಗರು ಆಡಳಿತ ಪಕ್ಷದ ನಾಯಕನ ಮೇಲೆ ಹಾಡಹಗಲೇ ಈ ರೀತಿ ಥಳಿಸಿದರೆ ಸಾರ್ವಜನಿಕರ ಕಥೆಯೇನು. ಆರೋಪಿಗಳನ್ನು ಬಂಧಿಸಿ ಶೀಘ್ರವೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಬಿಜೆಪಿ ನಾಯಕ ರಾಹುಲ್ ಪಂಡಿತ್ ಮೇಲಿನ ಹಲ್ಲೆ ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ರಾಜಕೀಯ ನಾಯಕರಿಗೆ ಈ ರೀತೊಯಾದರೆ ಮಿಕ್ಕವರ ಗತಿಯೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.