

ಬಿಜೆಪಿ-ಜೆಡಿಎಸ್ ಒಳಗಿನಿಂದ ಒಂದೇ ಇದ್ದರೂ ಈಗ ಬಹಿರಂಗ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆ ಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ನೋಡಿದಾಗ, ಅದು ನೆಲೆ ಇಲ್ಲದ ಪಕ್ಷಗಳ ಹೊಂದಾಣಿಕೆಯಾಗಿರುವAತಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶï ಬೈರತಿ ಲೇವಡಿ ಮಾಡಿದರು. ಅಲ್ಲದೆ ಎರಡು ಪಕ್ಷದವರು ಒಳಗಿನಿಂದ ಒಂದೇ ಇದ್ದರು. ಈಗ ಬಹಿರಂಗವಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ ಎಂದು ಕುಟುಕಿದರು.
ನಗರದಲ್ಲಿ ವಿಶ್ವಗುರು ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಮತ್ತು ಬಾಬು ಜಗಜೀವನರಾಂ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ, ಜೆಡಿಎಸï ಮೊದಲಿನಿಂದಲೋ ಒಂದೆ ಇz್ದÁರೆ.ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ಪರಿಣಾಮ ಆಗಲ್ಲ.ಯಾರು ಮೈತ್ರಿ ಮಾಡಿಕೊಂಡರು ನಮಗೆ ಏನು ತೊಂದರೆ ಇಲ್ಲ, ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿದರು.
ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಸಿದ ಬಿಜೆಪಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ನೆಲೆಯಿಲ್ಲದಂತಾಗಿದೆ. ಇನ್ನೂ ಜೆಡಿಎಸ್ ಅದೇ ಸ್ಥಿತಿ ಇದೆ. ನೆಲೆ ಇಲ್ಲ. ಎರಡು ಪಕ್ಷಗಳು ನೆಲೆ ಇಲ್ಲ ಹೀಗಾಗಿ ಅವರಿಬ್ಬರು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ನೆಲೆ ಇಲ್ಲದವರ ಒಪ್ಪಂದ ಇದಾಗಿದೆ ಎಂದು ಟೀಕಿಸಿದರು.
ಕಳೆದ ಬಾರಿ ಮಂಡ್ಯದಲ್ಲಿ ಸುಮಲತಾ ಅವರು ಸ್ವತಂತ್ರವಾಗಿ ನಿಂತು ಗೆದ್ದಿದ್ದರು. ಒಳಗಡೆ ರಾಜಕೀಯ ಏನಾಗಿತ್ತು ಅಂತಾ ಗೊತ್ತಿಲ್ಲ. ಆದರೆ, ಈ ಸಲ ನಾವು ಮಂಡ್ಯ ಸೇರಿದಂತೆ ೨೦ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಸುಮಲತಾ ಅವರುÀ ಏನು ನಿರ್ಧಾರ ಮಾಡುತ್ತಾರೋ ನೋಡೋಣ. ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುರೇಶ ಹೇಳಿದರು.
ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲೀನ್‌ಅವರ ಹೇಳಿಕೆಗೂ ನಮಗೂ ಸಂಬAಧ ಇಲ್ಲ. ಅದು ವೈಯಕ್ತಿಕ ಅಭಿಪ್ರಾಯ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್ ದಾಖಲು ಮಾಡಿದರೆ, ಅವರಾಗಲಿ,ನಾವಾಗಲಿ ಬಗ್ಗಲ್ಲ. ಯಾವುದೇ ಬೆದರಿಕೆಗೆ ಖರ್ಗೆ ಅವರು ಹೆದರುವುದಿಲ್ಲ ಎಂದರು.