

ಕೋಲಾರ: ರಾಜ್ಯದ ಹಿತಕ್ಕಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅವಶ್ಯಕತೆಯಿದ್ದು, ಇದು ಉತ್ತಮವಾದ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.
ಎದುರಾಗುವ ಸಂಕಷ್ಟ, ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡಲು ಅನುಕೂಲವಾಗುತ್ತದೆ, ಮೈತ್ರಿ ಮಾಡಿಕೊಳ್ಳುವಲ್ಲಿ ಈಗಾಗಲೇ ವಿಫಲರಾಗಿದ್ದೇವೆ, ಸಮಾನ ಮನಸ್ಕರು ಒಗ್ಗಾಟಾಗಿ ಹೋದಾಗ ವೈಚಾರಿಕತೆಯನ್ನು ಗಟ್ಟಿಗೊಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಮಾತ್ರ ಜಾತ್ಯತೀತ ತತ್ವವನ್ನು ದೂರು ಮಾಡಿಕೊಳ್ಳಲಾಗಿದೆ ಎಂದು ಎಲ್ಲೂ ಹೇಳಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿರುವುದು ಜೆಡಿಎಸ್ ಪಕ್ಷನೆ. ಬಿಜೆಪಿ ಹಿಂದೂಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯಿತು, ದೇಶ ವಿರೋಧಿಗಳನ್ನು ಮಟ್ಟಹಾಕಲು ಮೋದಿಯವರು ಕ್ರಮವಹಿಸಿದ್ದಾರೆ. ಅವರ ವೈಚಾರಿಕತೆ, ದೂರದೃಷ್ಟಿ, ದೇಶಭಕ್ತಿ, ಅಭಿಮಾನ ಕಾಣಲು ಕನಸ್ಸುಕಂಡಿದ್ದರು, ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಮತಗಳನ್ನು ವಿಭಜನೆ ಮಾಡಿಕೊಂಡಿದ್ದರಿAದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅನುವು ಮಾಡಿಕೊಡಲಾಗಿದೆ. ಇಬ್ಬರು ಮೈತ್ರಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಇನ್ನು ಹೆಚ್ಚಿಗೆ ಸ್ಥಾನಗಳನ್ನು ಗಳಿಸಬಹುದಿತ್ತು. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ಮೈತ್ರಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಮತ್ತೆ ಶೂನ್ಯ ಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜಕೀಯ, ಸಾಮಾಜಿಕ ಧರ್ಮ ಪಾಲನೆ ಮಾಡಲು ದೇವೇಗೌಡರು, ಕುಮಾರಸ್ವಾಮಿ ಅವರು ಗಟ್ಟಿ ನಿರ್ಧಾರ ಮಾಡಿದ್ದು, ನಮ್ಮೆಲ್ಲರ ಬೆಂಬಲವಿದೆ. ಲೋಕಸಭೆ ಚುನಾವಣೆಯಲ್ಲಿ ಶಕ್ತಿ ಮೀರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಜಾತ್ಯತೀತ ಎಂದರೆ ಏನು ಎಂಬದನ್ನು ಕಾಂಗ್ರೆಸ್‌ನವರು ಹೇಳಲಿ. ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಧರ್ಮಗುರುಗಳ ಮೇಲೆ ಒತ್ತಡ ಹಾಕಿಸಿ ಮತಗಿಟ್ಟಿಸಿಕೊಂಡಿಲ್ವ. ಒಳ್ಳೆಯ ತತ್ವಗಳು ಇದ್ದರು ಆಚರಣೆ ಮಾಡುವವರು ಸಮುದಾಯವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಭಾವೈಖ್ಯತೆಯ ಬಗ್ಗೆ ಗೊತ್ತಿಲ್ಲದವರು ಜಾತ್ಯತೀತದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರ ರೀತಿ ಪುರಾಣ ಹೇಳುವುದಿಲ್ಲ, ನಮಗೆ ಇತಿಹಾಸಗೊತ್ತಿದೆ. ಕುಮಾರಸ್ವಾಮಿ, ದೇವೇಗೌಡರನ್ನು ಟೀಕೆ ಮಾಡುವ ಪಟ್ಟಂಗಿಗಳಿಗೆ ಮಂತ್ರಿಸ್ಥಾನ ಕಲ್ಪಿಸಲಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಯಾವ ರೀತಿ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಸಿದ್ದ ಎಂದರು