

ಬೆಂಗಳೂರು: ಪಕ್ಷ ಸಂಘಟನೆಗೆ ಬಲವರ್ಧನೆ ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಲು ಉದ್ದೇಶಿತ ಬಿಜೆಪಿ ಜನಸ್ವರಾಜ್ ಯಾತ್ರೆ ಗುರುವಾರ (ನ.18) ಶುರುವಾಗಲಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ಘೋಷಿಸಿರುವ ಚುನಾವಣಾಪೂರ್ವ ತಯಾರಿಯು ನಾಲ್ಕು ತಂಡಗಳ ಯಾತ್ರೆಯ ಭಾಗವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೊದಲು ನ.19ರಿಂದ 23ರವರೆಗೆ ನಿಗದಿಯಾಗಿತ್ತು. ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಕಾರಣ ದಿನಾಂಕ ಪರಿಷ್ಕರಿಸಲಾಗಿದೆ.