'ಮೊದಲು ಕೈ ನಾಯಕರಿಗೆ ನ್ಯಾಯ ಒದಗಿಸಿ': ರಾಹುಲ್​ ಗಾಂಧಿಗೆ ಬಿಜೆಪಿ ಸಲಹೆ

ರಾಹುಲ್​ ಗಾಂಧಿ
Published on

ಮುಂಬೈ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾನುವಾರ ಮಣಿಪುರದ ಇಂಫಾಲ್​ನಿಂದ ಆರಂಭವಾಗಿರುವ ಭಾರತ ಜೋಡೋ ನ್ಯಾಯ ಯಾತ್ರೆಯ ವಿರುದ್ಧ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ. ಮೊದಲು ಕಾಂಗ್ರೆಸ್​ ನಾಯಕರಿಗೆ ನ್ಯಾಯ ಒದಗಿಸಿ ಎಂದು ಕೈ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಗುಡುಗಿದೆ.

ಕಾಂಗ್ರೆಸ್​ನ ಹಿರಿಯ ನಾಯಕ ಮಿಲಿಂದ್ ದೇವರಾ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಐಟಿ ಸೆಲ್​ ವಾಗ್ದಾಳಿ ನಡೆಸಿದೆ. ಮೊದಲು ಕಾಂಗ್ರೆಸ್​ ನಾಯಕರಿಗೆ ನ್ಯಾಯ ಒದಗಿಸಿ ತದನಂತರ ನ್ಯಾಯ ಯಾತ್ರೆ ಕೈಗೊಳ್ಳಿ ಎಂದು ಗುಡುಗಿದ್ದಾರೆ.

ಕಾಂಗ್ರೆಸ್​ ಭಾರತ ಜೋಡೋ ನ್ಯಾಯ ಯಾತ್ರೆ ಕೈಗೊಂಡ ಮೊದಲ ದಿನವೇ ಕಾಂಗ್ರೆಸ್​ನ ಹಿರಿಯ ನಾಯಕ ಮಿಲಿಂದ್ ದೇವರಾ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಕುಟುಂಬ ಹೊಂದಿದ್ದ 55 ವರ್ಷದಷ್ಟು ಹಳೆಯ ಸಂಬಂಧ ಅಂತ್ಯವಾಗುತ್ತಿದೆ ಅವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net