More

    55 ವರ್ಷದ ಕಾಂಗ್ರೆಸ್​ ಸಂಬಂಧ ಮುರಿದುಕೊಂಡ ಮಿಲಿಂದ್ ದೇವರಾ; ಶಿಂಧೆ ಬಣದ ಶಿವಸೇನಾ ಸೇರ್ಪಡೆ ಸಾಧ್ಯತೆ

    ಮುಂಬೈ: ಕಾಂಗ್ರೆಸ್​ನ ಹಿರಿಯ ನಾಯಕ ಮಿಲಿಂದ್ ದೇವರಾ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಕುಟುಂಬ ಹೊಂದಿದ್ದ 55 ವರ್ಷದಷ್ಟು ಹಳೆಯ ಸಂಬಂಧ ಅಂತ್ಯವಾಗುತ್ತಿದೆ ಎಂದು ಹೇಳಿದ್ದಾರೆ. ತಾನು ರಾಜೀನಾಮೆ ಕೊಟ್ಟಿರುವ ಸಂಗತಿಯನ್ನು ಅವರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

    ಇದನ್ನೂ ಓದಿ:ಭಾರತ- ಮಾಲ್ಡೀವ್ಸ್‌ ವಿವಾದದ ಬೆನ್ನಲ್ಲೇ ಲಕ್ಷದ್ವೀಪದಲ್ಲಿ ತಲೆ ಎತ್ತಲಿವೆ ಟಾಟಾದ 2 ತಾಜ್‌ ರೆಸಾರ್ಟ್ಸ್‌..

    ನಮ್ಮ ರಾಜಕೀಯ ಪ್ರಯಾಣದಲ್ಲಿ ಇವತ್ತಿಗೆ ಒಂದು ಪ್ರಮುಖ ಘಟ್ಟ ಮುಕ್ತಾಯವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಇದರೊಂದಿಗೆ ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷದ ಸಂಬಂಧ ಅಂತ್ಯಗೊಳಿಸುತ್ತಿದ್ದೇನೆ. ಹಲವು ವರ್ಷಗಳಿಂದ ಅಚಲವಾಗಿ ಬೆಂಬಲ ನೀಡುತ್ತಾ ಬಂದ ಎಲ್ಲಾ ನಾಯಕರು, ಸಹವರ್ತಿಗಳು ಹಾಗೂ ಕಾರ್ಯಕರ್ತರಿಗೆ ನಾನು ಋಣಿಯಾಗಿದ್ದೇನೆ ಎಂದು ಮಿಲಿಂದ್ ದೇವರಾ ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ವಿಚಾರವು ಮಿಲಿಂದ್ ದೇವರಾ ಅವರನ್ನು ಪಕ್ಷದಿಂದ ದೂರಗೊಳಿಸುವಂತೆ ಮಾಡಿದೆ ಎನ್ನುವುದು ಇನ್ನೂ ದೃಢಪಡದ ವಿಚಾರ. ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ಹೇಳಿಕೊಂಡಿದೆ. ಶಿವಸೇನೆಯು ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಭಾಗವಾಗಿದ್ದರೂ ಯಾರೊಂದಿಗೆ ಸಮಾಲೋಚನೆ ಮಾಡದೆಯೇ ಏಕಪಕ್ಷೀಯವಾಗಿ ಮುಂಬೈ ದಕ್ಷಿಣ ಕ್ಷೇತ್ರದ ತಮ್ಮದೆಂದು ಹೇಳಿಕೊಂಡಿದ್ದು ಮಿಲಿಂದ್ ದೇವರಾಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಪಕ್ಷ ತೊರೆದಿರಬಹುದು ಎನ್ನಲಾಗುತ್ತಿದೆ.

    ಲಿಂದ್​ ದಿಯೋರಾ ಅವರು ಕಾಂಗ್ರೆಸ್​ನ ಹಿರಿಯ ನಾಯಕ ಏಳು ಬಾರಿಯ ಸಂಸದರಾಗಿದ್ದ ಮುರಳಿ ದಿಯೋರಾ ಅವರ ಮಗ. ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮಿಲಿಂದ್​ ಕಾಂಗ್ರೆಸ್​ ಪಕ್ಷದ ಜೊತೆಗೆ ಮುನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಪಕ್ಷಕ್ಕೆ ಬರುವಂತೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಹಿರಂಗ ಆಹ್ವಾನ ನೀಡಿತ್ತು.

    ಅನಂತ್ ಕುಮಾರ್ ಹೆಗ್ಡೆಯಿಂದ ಉತ್ತಮ ಸಂಸ್ಕೃತಿ ಅಪೇಕ್ಷಿಸಲು ಸಾಧ್ಯವೇ; ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts