More

    ಅನಂತ್ ಕುಮಾರ್ ಹೆಗ್ಡೆಯಿಂದ ಉತ್ತಮ ಸಂಸ್ಕೃತಿ ಅಪೇಕ್ಷಿಸಲು ಸಾಧ್ಯವೇ; ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಆಕ್ರೋಶ

    ಬೆಂಗಳೂರು: ಕಾಂಗ್ರೆಸ್ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಿಡಿಕಾಡಿದ್ದಾರೆ.

    ಇದನ್ನೂ ಓದಿ:ಮುಕೇಶ್ ಅಂಬಾನಿ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ – ಎಲ್ಲಿ, ಯಾವಾಗ? ವೆಬಮಾಹಿತಿ ಇಲ್ಲಿದೆ..

    ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ ಉದ್ದೇಶದಿಂದ ಉತ್ತರ ಕನ್ನಡ ಸಂಸದರಾದ ಅನಂತಕುಮಾರ ಹೆಗ್ಡೆಯವರು ಬಳಸಿದ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗ್ಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂಸದ ಅನಂತ್ ಕುಮಾರ್ ಹೆಗಡೆಗೆ ಪಾಪ ಹೆಚ್ಚು ಕಮ್ಮಿ ಆಗಿದೆ. ಇಷ್ಟು ದಿನ ಸ್ವಲ್ಪ ರೆಸ್ಟ್‍ನಲ್ಲಿ ಇದ್ದರು. ಅವರಿಗೆ ಜನರೇ ಇದಕ್ಕೆ ಉತ್ತರ ಕೊಡ್ತಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಿಡಿಕಾಡಿದ್ದಾರೆ.

    ಅನಂತ ಕುಮಾರ್ ಹೆಗ್ಡೆ ಹೇಳಿದ್ದು: ಕಾಂಗ್ರೆಸ್ ಕಾಲಘಟ್ಟದಲ್ಲಿ, ನೂರಾರು ಸಂತರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾವಿರಾರು ಗೋವುಗಳನ್ನು ಗುಂಡಿಕ್ಕೆ ಕೊಲ್ಲಲಾಯಿತು. ಈ ಘಟನೆಗಳಿಂದ ಅಂದು ಕಾಶಿಯಲ್ಲಿದ್ದ ಕರಪಾತ್ರಿ ಮಹಾರಾಜರು ತೀವ್ರವಾಗಿ ನೊಂದುಕೊಂಡರು. ಅವರನ್ನು ನಡೆದಾಡುವ ದೇವರು ಎಂತಲೇ ಜನರು ಅವರನ್ನು ಪೂಜಿಸುತ್ತಿದ್ದರು. ಅಂಥ ವ್ಯಕ್ತಿಯು ಇಂದಿರಾ ಗಾಂಧಿಯವರಿಗೆ ಅದೊಂದು ಶಾಪವನ್ನು ನೀಡಿದರು. ನಿನ್ನ ಅಂತ್ಯ ಗೋಪಾಷ್ಟಮಿ ದಿನವೇ ಆಗಲಿ ಎಂದು. ಆ ಶಾಪ ಅವರ ಇಡೀ ಕುಟುಂಬವನ್ನು ಕಾಡುತ್ತಿದೆ. ಇಂದಿರಾ ಪುತ್ರ ಸಂಜಯ್ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಸತ್ತಿದ್ದು ಎಲ್ಲವೂ ಗೋಪಾಷ್ಟಮಿಯ ದಿನದಂದೇ ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದರು.

    ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ, ಅವರು ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ಮತಕ್ಕಾಗಿ ಹರಾಜಾಗಿ ಹೋದವರು ನಮ್ಮ ವಿರೋಧಿಗಳು ಎಂದು ಅಸಮಾಧಾನ ಹೊರಹಾಕಿದ್ದರು.

    ಎಲಿಮಿನೇಷನ್​ ಕೆನ್ನಾಲಿಗೆಯಲ್ಲಿ ಸಂತು-ಪಂತು; ಬಿಕ್ಕಿಬಿಕ್ಕಿ ಅತ್ತ ವರ್ತೂರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts