More

    ಮುಕೇಶ್ ಅಂಬಾನಿ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ – ಎಲ್ಲಿ, ಯಾವಾಗ? ಮಾಹಿತಿ ಇಲ್ಲಿದೆ..

    ಮುಂಬೈ: ಏಷ್ಯಾದ ನಂಬರ್ 1 ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್ ಗ್ರೂಪ್ಸ್ ನ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಶುಭ ಸಮಾರಂಭದ ಸಂತಸ ಮನೆಮಾಡಿದೆ. ಮುಕೇಶ್ -ನಿತಾ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಡ್ ಅವರ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಗಣ್ಯರನ್ನು ಆಹ್ವಾನಿಸುವ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅನಂತ್ -ರಾಧಿಕಾ ವಿವಾಹ ನಿಶ್ಚಿತಾರ್ಥ ಕಳೆದ ವರ್ಷವೇ ನಡೆದಿತ್ತು. ಇದೀಗ ವಿವಾಹ ಪೂರ್ವ ಕಾರ್ಯಕ್ರಮದ ದಿನ, ಸ್ಥಳವನ್ನು ನಿಗದಿ ಮಾಡಲಾಗಿದ್ದು, ಆಹ್ವಾನ ಪತ್ರಗಳನ್ನು ಕೊಟ್ಟು ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸುತ್ತಿದ್ದಾರೆ.
    ಇದನ್ನೂ ಓದಿ: ಸಂಸತ್​ ದಾಳಿ ಪ್ರಕರಣ; ಈ ಕೃತ್ಯದ ಮಾಸ್ಟರ್​ ಮೈಂಡ್ ಮೈಸೂರಿನ ಮನೋರಂಜನ್​​
    ಅಂಬಾನಿ ಕುಟುಂಬದಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ಆಹ್ವಾನ ಪತ್ರಿಕೆಯ ಪ್ರಕಾರ ಇದೇ ಮಾ.1 ರಿಂದ 3ರವರೆಗೆ ಮೂರು ದಿನ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿದೆ. ಆದರೆ ಮದುವೆ ಕಾರ್ಯಕ್ರಮ ಯಾವಾಗ, ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಆಮಂತ್ರಣ ಪತ್ರದಲ್ಲಿ, ಕೋಕಿಲಾಬೆನ್ ಮತ್ತು ಧೀರೂಭಾಯಿ ಅಂಬಾನಿ, ಪೂರ್ಣಿಮಾಬೆನ್ ಮತ್ತು ರವೀಂದ್ರಬಾಯಿ ದಲಾಲ್ ಅವರ ಆರ್ಶೀರ್ವಾದದೊಂದಿಗೆ ಎಂದು ಪ್ರಾರಂಭವಾಗಿ.. ನಮ್ಮ ಪುತ್ರ ಅನಂತ್-ರಾಧಿಕಾ ಅವರ ಪ್ರೀ ವೆಡ್ಡಿಂಗ್‌ಗೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ಗುಜರಾತ್‌ನ ಜಾಮ್‌ನಗರದಲ್ಲಿ ಮಾ.1, ಮಾ. 2 ಹಾಗೂ ಮಾ.3ರಂದು ನಡೆಯಲಿದೆ. ದಯವಿಟ್ಟು ದಿನಾಂಕವನ್ನು ಸೇವ್ ಮಾಡಿಕೊಳ್ಳಿ. ನಿತಾ ಮತ್ತು ಮುಕೇಶ್ ಅಂಬಾನಿ ಅವರಿಂದ ಪ್ರೀತಿಯ ಸ್ವಾಗತ ಎಂದು ಬರೆಯಲಾಗಿದೆ.

    ಜಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. 1997ರಲ್ಲಿ ರಿಲಯನ್ಸ್ ಜಾಮ್​ನಗರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದೆ. ಈ ಪ್ರದೇಶದಲ್ಲಿ 1 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದೆ. ಕಳೆದ 25 ವರ್ಷಗಳಲ್ಲಿ ನಾವು ಜಾಮ್‌ನಗರದಲ್ಲಿ ನಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ನಿರ್ಮಿಸಿದ್ದೇವೆ. ಇದು ನಮ್ಮ ಹೃದಯಕ್ಕೆ ಹತ್ತಿರವಾದ ಸ್ಥಳವಾಗಿದೆ. ರಾಧಿಕಾ ಮತ್ತು ಅಂತ್ ಪ್ರೀ ವೆಡ್ಡಿಂಗ್ ಸಮಾರಂಭವನ್ನು ಆಚರಿಸುತ್ತಿದ್ದು, ನೀವು ನಮ್ಮೊಂದಿಗೆ ಇರಲು ಎದುರು ನೋಡುತ್ತಿದ್ದೇವೆ ಎಂದು ಮುಕೇಶ್ ಅಂಬಾನಿ ದಂಪತಿ ಕೈಬರಹದ ಆಮಂತ್ರಣದಲ್ಲಿ ತಿಳಿಸಿದ್ದಾರೆ.

    ವಿವಿಧ ಕ್ಷೇತ್ರಗಳ ದಿಗ್ಗಜರು, ಸೆಲೆಬ್ರೆಟಿಗಳು, ಉದ್ಯಮಿಗಳು ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಂಪತಿ, ವಿರಾಟ್ ಕೊಹ್ಲಿ, ಅಮಿತಾಬ್ ಬಚ್ಚನ್ ದಂಪತಿ, ಐಶ್ವರ್ಯ ರೈ ಬಚ್ಚನ್ ದಂಪತಿ, ರಣವೀರ್-ದೀಪಿಕಾ ಅವರಿಗೂ ಆಮಂತ್ರಣ ತಲುಪಲಿದೆ.

    ಮಕರ ಸಂಕ್ರಾಂತಿಯಂದು ದೇವರಿಗೆ ಪ್ರೀಯವಾದ ಈ ಖಾದ್ಯವನ್ನು ಅರ್ಪಿಸಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ| ರಾಜಗುರು ದ್ವಾರಕನಾಥ್ ಗುರೂಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts