ಬಿಜೆಪಿ ನಮ್ಮ ವಿರೋಧಿ; ಚುನಾವಣೆ ಬಳಿಕವೂ ಯಾವುದೇ ಮೈತ್ರಿಕೂಟ ಸೇರಲ್ಲ; ಪ್ರಶಾಂತ್ ಕಿಶೋರ್| Prashant Kishor

ವಿಜಯವಾಣಿ - 2025-11-09T194040.718
Published on

ಪಾಟ್ನಾ: ಬಿಹಾರದ ಚುನಾವಣೆಯಲ್ಲಿ ನಮ್ಮ ಪಕ್ಷ ಸಂಪೂರ್ಣ ಬಹುಮತ ಪಡೆಯಲು ವಿಫಲವಾದರೇ ನಾವು ಯಾವುದೇ ಸಮ್ಮಿಶ್ರ ಸರ್ಕಾರವನ್ನು ಸೇರಲ್ಲ. ನಾವು ಬಿಜೆಪಿಯನ್ನು ವಿರೋಧಿಸುತ್ತೇವೆ ಎಂದು ಭಾನುವಾರ(ನ. 09) ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಹೇಳಿದ್ದಾರೆ.

ಎಎನ್​ಐ ಜೊತೆ ಮಾತನಾಡಿರುವ ಪ್ರಶಾಂತ್ ಕಿಶೋರ್, ನಮ್ಮ ಪಕ್ಷದ ತತ್ವದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲ್ಲ. ಬಿಹಾರದ ಜನರು ಇನ್ನೂ ಬದಲಾಗಲು ಬಯಸದಿದ್ದರೆ, ನಾವು ಅವರೊಂದಿಗೆ ಇದ್ದು ಇನ್ನೂ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ. ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ. ಜಾನ್ ಸುರಾಜ್ ಸ್ವಂತ ಬಲದಿಂದ ಸರ್ಕಾರ ರಚಿಸುತ್ತದೆ. ಇಲ್ಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ. ಅಗತ್ಯ ಬಿದ್ದರೆ ಮತ್ತೊಂದು ಚುನಾವಣೆಗೆ ಒತ್ತಾಯಿಸುತ್ತೇವೆ. ನಾವು ಸೈದ್ದಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಜನ್​ ಸುರಾಜ್ ಕಟ್ಟಲು ರಕ್ತ ಮತ್ತು ಬೆವರನ್ನು ಸುರಿಸಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಬದಲಾವಣೆ ಕಾಣುತ್ತಿದೆ. ಫಲಿತಾಂಶಗಳಿಗಾಗಿ ಕಾಯೋಣ. ಫಲಿತಾಂಶದಲ್ಲಿ ನಮ್ಮ ಪಕ್ಷ ಭಾರೀ ಬಹುಮತವನ್ನು ಗಳಿಸಬಹುದು. ಇಲ್ಲ ಕಡಿಮೆ ಸ್ಥಾನಗಳನ್ನು ಗೆಲ್ಲಬಹುದು. ಅಧಿಕಾರ ಪಡೆಯಲು ನಾವು ಇನ್ನೂ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇವೆ. ಆತುರವೇನು? ನನಗೆ ಈಗ ಕೇವಲ 48 ವರ್ಷ ಎಂದಿದ್ದಾರೆ.

ಬಿಜೆಪಿಯವರು ಬಿಹಾರದಿಂದ ಮತಗಳನ್ನು ಪಡೆಯುತ್ತಾರೆ. ಆದರೆ ಕಳೆದ 15 ವರ್ಷಗಳಿಂದ ಪ್ರಧಾನಿ ಮೋದಿ ಬಿಹಾರದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸದೇ, ಗುಜರಾತ್‌ನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆ ಎಂದು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net