ಸರ್ಕಾರ ಉರುಳಿಸುವುದರಲ್ಲಿ ಬಿಜೆಪಿಯವರು ನಿಪುಣರೆಂದ ಸಚಿವ

BJP vs Congress
Published on

ಬೆಂಗಳೂರು: ಬಿಜೆಪಿಯವರು ದೇಶಾದ್ಯಂತ ಜನರಿಂದ ಆಯ್ಕೆ ಆದ ಸರ್ಕಾರ ಉರುಳಿಸುವುದರಲ್ಲಿ ಪರಿಣಿತರು. ಬೇರೆ ಬೇರೆ ರಾಜ್ಯದಲ್ಲಿ ಅನೇಕ ಸರ್ಕಾರ ಪತನಗೊಳಿಸಿದ್ದಾರೆ. ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಅಧಿಕಾರಕ್ಕಾಗಿ ಅವರು ಏನು ಮಾಡುವುದಕ್ಕೂ ಹೇಸುವುದಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿ ಇರಬಹುದು, ಹಾಗಾಗಿ ಮಾತಾಡಿದ್ದಾರೆ ಎಂದರು.

ಹಿಂದಿನ ಸಚಿವರೋ ಅಥವಾ ಸಿಎಂ ಅವರೋ ಒಂದು ಹೇಳಿಕೆ ಕೊಟ್ಟಿದ್ದನ್ನ ನೋಡಿದ್ದೇನೆ. ಹಾಗಾಗಿ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿರಬಹುದು. ನಮ್ಮ ಶಾಸಕರ ಬಗ್ಗೆ ನಂಬಿಕೆ ಇದೆ ಆದರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net