

ಬೆಂಗಳೂರು: ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಪದವೀಧರ/ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರತಿಪಕ್ಷ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಅರ್ಹ ಮತದಾರರ ನೋಂದಣಿ ಪ್ರಕ್ರಿಯೆಗೆ ಪ್ರೇರಣೆ ಸೇರಿ ಹಲವು ಚಟುವಟಿಕೆಗಳ ಮೇಲ್ವಿಚಾರಣೆಗೆ ಉಸ್ತುವಾರಿಗಳನ್ನು ನೇಮಿಸಿದೆ.
ಮಾಜಿ ಸಚಿವರಿಗೆ ಕ್ಷೇತ್ರಾವಾರು ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಪದವೀಧರ ಕ್ಷೇತ್ರಗಳು: ಈಶಾನ್ಯ- ಬಿ.ಶ್ರೀರಾಮುಲು, ನೈಋತ್ಯ- ಸಿ.ಟಿ.ರವಿ, ಬೆಂಗಳೂರು- ಆರ್.ಅಶೋಕ್. ಶಿಕ್ಷಕರ ಕ್ಷೇತ್ರ: ಆಗ್ನೇಯ- ಡಿ.ವಿ.ಸದಾನಂದಗೌಡ, ನೈಋತ್ಯ- ಸಿ.ಟಿ.ರವಿ, ದಕ್ಷಿಣ: ಕೆ.ಎಸ್.ಈಶ್ವರಪ್ಪ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣರನ್ನು ಉಸ್ತುವಾರಿಗಳನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ನೇಮಿಸಿದ್ದಾರೆ.