ಬಿಜೆಪಿ ಹೈಕಮಾಂಡ್​ ತೀರ್ಮಾನಕ್ಕೆ ಬದ್ಧ

MUNISWAMY
Published on

ಕೋಲಾರ: ಬಿಜೆಪಿ ಹೈಕಮಾಂಡ್​ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ, ಲೋಕಸಭೆ ಚುನಾವಣೆ ಸಂಬಂಧ ಇದುವರೆಗೂ ಯಾರಿಗೂ ಟಿಕೆಟ್​ ನೀಡಿಲ್ಲ, ಊಹಾ ಪೋಹಗಳಿಗೆ ಯಾರು ಕಿವಿಗೋಡಬಾರದು ಎಂದು ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಿಗೂ ಬಿ ಫಾರಂ ನೀಡಿಲ್ಲ, ನನಗೆ ಬಿ ಫಾರಂ ನೀಡಿ ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್​ ಅವಕಾಶ ನೀಡಿದ್ದಾರೆ. ನನ್ನ ಅವಧಿಯು ಇನ್ನು ಮುಗಿದಿಲ್ಲ. ಯಾಕೆ ಕೆಲವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಬಿಜೆಪಿಯಲ್ಲಿ 81 ಪರಿಶಿಷ್ಟ್ಟ ಜಾತಿ, ಪಂಡಗದ ಸಂಸದರು ಇದ್ದಾರೆ. ಇದರ ಕೀರ್ತಿ ನರೇಂದ್ರ ಮೋದಿವರಿಗೆ ಸೇರಿಬೇಕು. ಯಾರಿಗೆ ಟಿಕೆಟ್​ ನೀಡಬೇಕು ಎಂದು ಸರ್ವೇ ನಡೆಸುತ್ತಿದ್ದಾರೆ. ನಾನು ಐದು ವರ್ಷಗಳಿಂದ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂಬುದು ರಾಜ್ಯ, ರಾಷ್ಟ್ರ ವರಿಷ್ಠರಿಗೆ ಮಾಹಿತಿಯಿದೆ ಎಂದು ತಿಳಿಸಿದರು.
ದೇಶದಲ್ಲಿನ ದೊಡ್ಡ ನಾಯಕರಿಗೆ ಇನ್ನು ಟಿಕೆಟ್​ ನೀಡಿಲ್ಲ. ಬಿಜೆಪಿಯಲ್ಲಿ ಎಲ್ಲಾರೂ ಒಗ್ಗಟಾಗಿಯೇ ಇದ್ದೆವೆ. ಊಹಾ ಪೋಹಗಳಿಗೆ ಯಾರು ಕಿವಿಗೋಡಬಾರದು. 1989ರಿಂದ ಲೋಕಸಭೆ ಚುನಾವಣೆಗಳು ನಡೆದಿವೆ. ಅಂದಿನಿಂದ ಅಭಿವೃದ್ಧಿ ಕಾಣದ ಕ್ಷೇತ್ರವನ್ನು ಐದು ವರ್ಷದಲ್ಲಿ ಮಾಡಿ ತೋರಿಸಲಾಗಿದೆ ಎಂದರು.
ನಾವು ಸಂಸದನಾಗಿ ಆಯ್ಕೆಯಾಗಿನಿಂದ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಪಕ್ಷದ ವರಿಷ್ಠ್ಠರ ಬಳಿ ಮಾಹಿತಿಯಿದೆ. ದೇಶದ ರಾಮಭಕ್ತರಿಗೆ, ಮತದಾರರಿಗೆ ಯಾವುದೇ ರೀತಿ ಅನ್ಯಾಯವಾಗುವುದಿಲ್ಲ. ನರೇಂದ್ರ ಮೋದಿ 3ನೇ ಬಾರಿ ಮತ್ತೆ ಪ್ರಧಾನ ಮಂತ್ರಿಯಾಗಬೇಕು.
ರಾಜ್ಯವನ್ನು ಕಾಂಗ್ರೆಸ್​ ಮುಕ್ತಗೊಳಿಸಲು ಬಿಜೆಪಿಯ ಉದ್ದೇಶ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ವರಿಷ್ಠರು ತೀರ್ಮಾನಕೈಗೊಳ್ಳಲಿದ್ದು, ಇದಕ್ಕೆ ಎಲ್ಲಾರೂ ಬದ್ಧರಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net