

ನವದೆಹಲಿ: ಹತ್ರಾಸ್ ಕಾಲ್ತುಳಿತದಲ್ಲಿ 121 ಜನರ ಸಾವಿಗೆ ಕಾರಣವಾದ ಘಟನೆಯ ನಂತರ ಭೋಲೆ ಬಾಬಾ ಗ್ವಾಲಿಯರ್ ಆಶ್ರಮವನ್ನು ಸೀಲ್ ಮಾಡಲಾಗಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸತ್ಸಂಗ ಕಾರ್ಯಕ್ರಮ ನಡೆಸಿದ್ದರಿಂದ 121 ಜೀವಗಳು ಬಲಿಯಾದವು. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಇದರ ಬೆನ್ನಲ್ಲೇ ನೆರೆಯ ರಾಜ್ಯಗಳಲ್ಲಿನ ಸರ್ಕಾರಗಳು ಬಾಬಾ ಆಶ್ರಮಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ. ಇದರ ಭಾಗವಾಗಿ ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ಗ್ವಾಲಿಯರ್ನ ತಿಗ್ರಾ ರಸ್ತೆಯ ಹರಿ ವಿಹಾರ್ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಜಾಗದಲ್ಲಿ ಇರುವ ಆಶ್ರಮಕ್ಕೆ ಸೀಲ್ ಹಾಕಿದ್ದಾರೆ.
ನ್ಯಾಯಾಲಯದ ಅನುಮತಿಯೊಂದಿಗೆ ಶೀಘ್ರದಲ್ಲೇ ಬಾಬಾನ ಗ್ವಾಲಿಯರ್ ಆಶ್ರಮದ ಮೇಲೆ ದಾಳಿ ನಡೆಸಲು ಮಾಬಿ ಪೊಲೀಸರು ಯೋಜಿಸಿದ್ದಾರೆ. ಗ್ವಾಲಿಯರ್ನಲ್ಲೂ ಇದಕ್ಕಾಗಿ ಕ್ರಮಗಳನ್ನು ಆರಂಭಿಸಲಾಗಿದೆ. ಇದೇ ರೀತಿಯ ಆಶ್ರಮಗಳು ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ನಲ್ಲಿಯೂ ಬಾಬಾರವರಿಗೆ ಇವೆ. ಶೀಘ್ರವೇ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.