ಪಂಜಾಬ್ ಶಿವಸೇನೆ ನಾಯಕ ಸಂದೀಪ್ ಮೇಲೆ ಕತ್ತಿಗಳಿಂದ ದಾಳಿ..ಮೂಕಪ್ರೇಕ್ಷಕರಾದ ಪೊಲೀಸರು!

attack
Published on

ಚಂಡೀಗಢ: ಪಂಜಾಬ್ ಶಿವಸೇನಾ ನಾಯಕ ಸಂದೀಪ್ ಥಾಪರ್, ಅಲಿಯಾಸ್ ಗೋರಾ(58) ಲುಧಿಯಾನ ಸಿವಿಲ್ ಆಸ್ಪತ್ರೆ ಬಳಿ ತನ್ನ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ನಿಹಾಂಗ್ ಸಿಖ್ಖರಂತೆ ವೇಷ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ.

ಮೇಲೆ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು. ಥಾಪರ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆಸ್ಪತ್ರೆಯಿಂದ ಥಾಪರ್‌ ಹೊರಬರುತ್ತಿದ್ದಂತೆ ನಿಹಾಂಗ್ ಸಿಖ್‌ಗಳಂತೆ ವೇಷಧರಿಸಿ ಕತ್ತಿ ಹಿಡಿದ ಇಬ್ಬರು ವ್ಯಕ್ತಿಗಳು, ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಥಾಪರ್ ಅವರನ್ನು ಸಮೀಪಿಸುತ್ತಿರುವುದನ್ನು ಕಾಣಬಹುದು. ಬಳಿಕ ಅವರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು, ಅವರ ಅಂಗರಕ್ಷಕ ಹಿಂಬದಿ ಸೀಟಿನಲ್ಲಿ ಕುಳಿತಿದ್ದ. ಆಗ ಶಿವಸೇನೆ ನಾಯಕನ ಬಳಿಗೆ ಕತ್ತಿ ಹಿಡಿದ ವ್ಯಕ್ತಿಗಳು ಬಂದು ದಾಳಿ ಮಾಡಲು ಪ್ರಾರಂಭಿಸಿದರು. ಅವರು ಕೈ ಜೋಡಿಸಿ ಜೋಡಿಸಿ ಬಿಟ್ಟುಬಿಡು ಎಂದು ಬೇಡಿಕೊಳ್ಳುತ್ತಾರೆ. ಆದರೆ ಅವನು ನಿಲ್ಲಿಸುವುದಿಲ್ಲ. ಮತ್ತೊಬ್ಬ ನಿಹಾಂಗ್ ಸಹ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಥಾಪರ್​ ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ.

ಆಗ ಮಾರ್ಗದಲ್ಲಿ ಸಂಚರಿಸುತ್ತಿದ್ದವರು ಮತ್ತು ಪೊಲೀಸರು ಮೂಕಪ್ರೇಕ್ಷಕರಂತಿದ್ದರು ಎನ್ನಲಾಗಿದೆ. ಬಳಿಕ ದಾಳಿಕೋರ ಸ್ಕೂಟರ್ ಅನ್ನು ಎತ್ತಿಕೊಂಡು ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಶುಕ್ರವಾರ ಬೆಳಿಗ್ಗೆ ಥಾಪರ್ ತನ್ನ ಗನ್‌ಮ್ಯಾನ್‌ನೊಂದಿಗೆ ಸಿವಿಲ್ ಆಸ್ಪತ್ರೆಯನ್ನು ನಡೆಸುತ್ತಿರುವ ಸಂವೇದನಾ ಟ್ರಸ್ಟ್‌ನ ಅಧ್ಯಕ್ಷ ರವೀಂದರ್ ಅರೋರಾ ಅವರ ಮರಣ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಥಾಪರ್ ಗೌರವ ಸಲ್ಲಿಸಿ ಹೊರಬಂದ ಕೂಡಲೇ ದಾಳಿ ನಡೆಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net