2ನೇ ಹಂತದ ಲಾಕ್​ಡೌನ್​ಗೆ ಬಿಜೆಪಿಯಿಂದ ತಯಾರಿ ಶುರು

page 10 3
Published on

ಬೆಂಗಳೂರು: ಹೈಕಮಾಂಡ್ ಸೂಚನೆ ಬಳಿಕ ಇನ್ನಷ್ಟು ಸಕ್ರಿಯವಾಗಿರುವ ಬಿಜೆಪಿ, ಕರೊನಾ 2ನೇ ಹಂತದ ಲಾಕ್ ಡೌನ್​ಗೆ ಮಾನಸಿಕವಾಗಿ ಸಿದ್ಧರಿರುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದೆ.

ಮೊದಲ ಹಂತದ ಲಾಕ್​ಡೌನ್ ಸಂದರ್ಭದಲ್ಲಿ ತಂಡವಾಗಿ ಪಕ್ಷ ಕೆಲಸ ಮಾಡಿದ್ದರೂ, 2ನೇ ಹಂತ ಪ್ರಮುಖ ಮತ್ತು ನಿರ್ಣಾಯಕ ಹಂತವಾಗಲಿದೆ. ಹಾಗಾಗಿ ಈ ಸಂಕಷ್ಟದ ಕೈಂಕರ್ಯಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ನಿತ್ಯದ ಕೆಲಸಗಳ ಬಗ್ಗೆ ಪ್ರತಿಯೊಬ್ಬರು ಬಿಜೆಪಿ ಕೇಂದ್ರ ಕಚೇರಿ, ಉಸ್ತುವಾರಿ ವಹಿಸಿರುವ ಪ್ರಮುಖರಿಗೆ ಮಾಹಿತಿ ಕಳುಹಿಸಿಕೊಡಬೇಕು ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net