ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ ಕಾವೇರಿ ನೀರು ಪೂರೈಕೆ: ಬಿಜೆಪಿ ಟೀಕೆ | Scam in water supply scheme

Water tanker
Published on

ಬೆಂಗಳೂರು: ಹಳೇ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು, ನವೀಕರಿಸಿದಂತೆ ಬಿಂಬಿಸಿ ‘ಸಂಚಾರಿ ಕಾವೇರಿ’ಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಟ್ಯಾಂಕರ್ ಮಾಫಿಯಾಗೆ ಕಡಿವಾಣ, ಜನಪರ ಯೋಜನೆ ಮಂತ್ರ ಜಪಿಸುತ್ತಾ ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಲೇಪಿಸಿ ಜನರ ಬಾಗಿಲಿಗೆ ಅಶುದ್ಧ ನೀರು ತಲುಪಿಸುತ್ತದೆ ಎಂದು ದೂರಿದ್ದಾರೆ.

ಈ ಟ್ಯಾಂಕರ್‌ಗಳ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಎಷ್ಟು ಮೊತ್ತವೆಂದು ಊಹಿಸಲು ಸಾಧ್ಯವಿಲ್ಲ. ಬಿಐಎಸ್ ಪ್ರಮಾಣಿತ ನೀರು ಎಂದು ಬಿಂಬಿಸಲಾಗಿದೆ. ಆದರೆ ಸ್ವಚ್ಛತೆ, ಸುರಕ್ಷತೆ ಹಾಗೂ ಜನರ ಆರೋಗ್ಯವನ್ನು ಸರ್ಕಾರ ಕಡೆಗಣಿಸಿದೆ ಎಂದು ದೂರಿದ್ದಾರೆ.

ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ ಅಶುದ್ಧ ನೀರು ಪೂರೈಸುವುದು ಕಾಂಗ್ರೆಸ್ ಸರ್ಕಾರದ ಎಂಟನೇ ಗ್ಯಾರಂಟಿಯೇ ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದು, ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ‘ಸಂಚಾರಿ ಕಾವೇರಿ’ ಎಂಬ ಯೋಜನೆಗೆ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿದ್ದನ್ನು ಖಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net