ಅಮಿತ್​ ಷಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆ ಮುಕ್ತಾಯ; ಸಭೆ ಬಳಿಕ ಸಿ.ಟಿ.ರವಿ ಹೇಳಿದ್ದೇನು?

BJP Core Committe
Published on

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಕೋರ್​ ಕಮಿಟಿ ಸಭೆ ನಡೆದಿದ್ದು, ಇದೀಗ ಕೆಲವು ನಿಮಿಷಗಳ ಮೊದಲು ಸಭೆ ಮುಕ್ತಾಯಗೊಂಡಿದೆ. ಈ ಸಭೆಯಲ್ಲಿ ಭಾಗವಹಿಸಿದ ಷಾ ದೆಹಲಿಯತ್ತ ನಿರ್ಗಮಿಸಿದ್ದಾರೆ. ಅದರ ಬೆನ್ನಿಗೇ ಇತ್ತ ಸಿ.ಟಿ. ರವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ 26 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಆಗಿದೆ, ಏಳು ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಬಾಕಿ ಇದೆ. ಅದಾಗ್ಯೂ ಕಳೆದ ಕೆಲ ತಿಂಗಳ ಸಂಘಟನೆ ಪರಿಣಾಮ ನಮ್ಮ ಪರ ಅಲೆ ಇದ್ದು, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕಾರ್ಯಕರ್ತರಲ್ಲಿ ಉತ್ಸಾಹ ಇದೆ, ನಾವು ಗೆಲ್ಲೋದು ನಿಶ್ಚಿತ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಎಸ್​ಸಿ-ಎಸ್​ಟಿ ಮೀಸಲಾತಿ ಕೊಟ್ಟಿದ್ದೆವು, ಇದರಿಂದ ಕಾಂಗ್ರೆಸ್‌ನವರ‌ ಉತ್ಸಾಹ ಕಮರಿ ಹೋಗಿತ್ತು. ಈಗ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೇವೆ. ಇದರಿಂದ ಕಾಂಗ್ರೆಸ್‌ನವರಿಗೆ ಮರ್ಮಾಘಾತ ಆಗಿದೆ ಎಂದು ಅವರು ಹೇಳಿದರು.

ಅಮಿತ್ ಷಾ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಸಿ.ಟಿ.ರವಿ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಚುನಾವಣಾ ಸಹ ಉಸ್ತುವಾರಿಗಳಾದ ಮನ್​ಸುಖ್ ಮಾಂಡವೀಯ, ಅಣ್ಣಾಮಲೈ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮುಂತಾದವರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net