

ಬೆಂಗಳೂರು: ಅಮೆರಿಕ ಪ್ರವಾಸದ ವೇಳೆ ಹಲವು ಸಂವಾದ, ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಭಾರತಕ್ಕೆ ಅಪಮಾನ, ಮೀಸಲಾತಿ ರದ್ದು ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸೇರಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಠಾಣೆಗಳಲ್ಲಿ ಪ್ರತ್ಯೇಕವಾಗಿ ದೂರು ಸಲ್ಲಿಸಿದೆ. ಎ್ಐಆರ್ ದಾಖಲಿಸಿ, ಕಾನೂನು ಕ್ರಮವಹಿಸಲು ಕೋರಿದೆ.
ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಆಶಯ, ಸಂವಿಧಾನಬದ್ಧವಾದ ಮೀಸಲು ಸವಲತ್ತು ಪಡೆಯುತ್ತಿರುವ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳು ಏಳಿಗೆ ಹೊಂದುವ ಜತೆಗೆ ಸಾಮಾಜಿಕ, ಆರ್ಥಿಕವಾಗಿ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿವೆ.
ಸಂವಿಧಾನಬದ್ಧ ಹಕ್ಕಾಗಿರುವ ಮೀಸಲಾತಿ ಸೌಲಭ್ಯ ರದ್ದುಪಡಿಸುವ ಅರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿ, ಈ ಸಮುದಾಯಗಳಿಗೆ ಅಪಮಾನ ಮತ್ತು ವಿಭಜನೆಗೆ ಪ್ರಯತ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಲಘುವಾದ ಮಾತುಗಳನ್ನಾಡಿದ್ದಾರೆ. ಅಮೆರಿಕ ನೆಲದಲ್ಲಿ
ಭಾರತ ಹಾಗೂ ಸಮುದಾಯಗಳನ್ನು ಅಪಮಾನಿಸಿ, ಏಕತೆ, ಸಮಗ್ರತೆಗೆ ಚ್ಯುತಿ ಉಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ವಿವರಿಸಿದೆ.
ತಕ್ಷಣ ಎ್ಐಆರ್ ದಾಖಲಿಸಿ ಜಾಮೀನುರಹಿತ ವಾರಂಟ್ ಹೊರಡಿಸಬೇಕು ಎಂದು ಪೊಲೀಸರಿಗೆ ಬಿಜೆಪಿ ನಿಯೋಗ ಮನವಿ ಮಾಡಿಕೊಂಡಿದೆ. ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಚ್.ವಿ.ಮಂಜುನಾಥ್ ಹೂಡಿ ದೂರು ಸಲ್ಲಿಸಿದ್ದಾರೆ.
ನಂತರ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಅಜ್ಜಿ ಇಂದಿರಾಗಾಂಧಿಯವರನ್ನು ನೋಡಿ ರಾಹುಲ್ ಗಾಂಧಿ ಏನನ್ನೂ ಕಲಿತಿಲ್ಲ. ಪ್ರಬುದ್ಧರಾಗಿದ್ದೇವೆ ಎಂದು ಭಾವಿಸಿದ್ದೆವು, ಅದು ಕೂಡ ಇಲ್ಲವೆಂದು ಟೀಕಿಸಿದರು.
ದೇಶದೊಳಗೆ ಎಷ್ಟೇ ಮಾತನಾಡಿದರೂ ಅಭ್ಯಂತರವಿಲ್ಲ. ಆದರೆ ಹೊರ ದೇಶದಲ್ಲಿ ಭಾರತ, ಪ್ರಧಾನಿ, ಮೀಸಲು ವ್ಯವಸ್ಥೆ ಬಗ್ಗೆ ಅಪಮಾನಿಸಿರುವುದು ಸರಿಯಲ್ಲ. ಯಾವುದೇ ಸಬೂಬು ನೀಡದೆ ಎ್ಐಆರ್ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ರಾಜಕುಮಾರ್ ತೇಲ್ಕೂರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ರೆಡ್ಡಿ , ಕಾನೂನು ಪ್ರಕೋಷ್ಠದ ವಸಂತಕುಮಾರ್ ಇನ್ನಿತರರು ಇದ್ದರು.