Pawan Khera wife | ನಿನ್ನೆ ಪತಿ, ಇಂದು ಸತಿ; ಕಾಂಗ್ರೆಸ್​​ನ​​ ಖೇರಾ ದಂಪತಿಗಳ ವಿರುದ್ಧ ಎರಡು ವೋಟರ್​ ಐಡಿ ಆರೋಪ ಮಾಡಿದ ಬಿಜೆಪಿ !

Pawan Khera wife
Published on

Pawan Khera wife: ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ಪತ್ನಿ ಕೋಟಾ ನೀಲಿಮಾ ಹೆಸರಿನಲ್ಲಿ ಎರಡು ಮತದಾರರ ಗುರುತಿನ ಚೀಟಿಗಳಿವೆ ಎಂದು ಭಾರತೀಯ ಜನತಾ ಪಕ್ಷ ಬುಧವಾರ (ಸೆಪ್ಟೆಂಬರ್​​ 3) ಅರೋಪಿಸಿದೆ.

ಈ ವಿಷಯವಾಗಿ ಮಾತನಾಡಿರುವ ಬಿಜೆಪಿ ವಕ್ತಾರೆ ಶಾಜಿಯಾ ಇಲ್ಮಿ, ಕಾಂಗ್ರೆಸ್ ಪಕ್ಷ ಕೇವಲ ಮತ ಪಡೆಯುವುದರ ಬಗ್ಗೆ ಮಾತ್ರ ಗಮನಹರಿಸುತ್ತದೆ, ಪ್ರಜಾಪ್ರಭುತ್ವದ ಬಗ್ಗೆ ಅದಕ್ಕೆ ಕಾಳಜಿ ಇಲ್ಲ ಎನ್ನುವುದನ್ನು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು. ಕಾಂಗ್ರೆಸ್ ತನ್ನನ್ನು ತಾನೂ ಮೊಹಬ್ಬತ್ ಕಿ ದುಕಾನ್ ಎಂದು ಬಿಂಬಿಸಿಕೊಂಡರೂ, ವಾಸ್ತವದಲ್ಲಿ ಅದು ನಕಲಿ ಮತ್ತು ವಂಚನೆಯ ಮಾರುಕಟ್ಟೆ ಎಂದು ಟೀಕಿಸಿದರು.

ನಿನ್ನೆಯಷ್ಟೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಪಕ್ಷದ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ ಎರಡು EPIC ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ಆರೋಪಿ ಕೇಳಿಬಂದಿದ್ದು, 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಖೈರತಾಬಾದ್‌ನಿಂದ ಸ್ಪರ್ಧಿಸಿದ್ದ ಅವರ ಪತ್ನಿ ನೀಲಿಮಾ ಕೂಡ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್​​ ಹೇಳಿಕೆಯಿಂದ ಸಾಮಾನ್ಯರಿಗೆ ಕಿರುಕುಳ

ಪತ್ರಿಕಾಗೋಷ್ಠಿಯಲ್ಲಿ ಮತದಾರರ ಗುರುತನ್ನು ಬಹಿರಂಗಪಡಿಸುವ ಮೂಲಕ ರಾಹುಲ್​, ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ, ಅವರ ಗುರುತನ್ನು ಬಹಿರಂಗಪಡಿಸಿ ಕಿರುಕುಳಕ್ಕೆ ಒಳಪಡಿಸಿದ್ದಾರೆ, ಇದು ಪ್ರಜಾಪ್ರಭುತ್ವದ ಬಗ್ಗೆ ಇರುವ ಕಾಳಜಿಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದರು. ರಾಹುಲ್​​ ಕೈಗೊಂಡಿರುವ ಮತದಾರ ಅಧಿಕಾರ ಯಾತ್ರೆ ಮತದಾರರ ಹಕ್ಕುಗಳ ಬಗ್ಗೆ ಅಲ್ಲ, ಬದಲಾಗಿ ಅಧಿಕಾರದ ಬಗ್ಗೆ. ಭಾರತೀಯ ಚುನಾವಣಾ ಆಯೋಗ (ECI) ನಕಲಿ EPIC ಕಾರ್ಡ್‌ಗಳ ವಿಷಯವನ್ನು ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಇಲ್ಮಿ. ಈ ವಿಷಯದ ಬಗ್ಗೆ ವಿಪಕ್ಷ ನಾಯಕರು ತಮ್ಮ ಮೌನವನ್ನು ಮುರಿಯಬೇಕೆಂದು ಒತ್ತಾಯಿಸಿದರು.

ದೆಹಲಿಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಖೇರಾ ಅವರನ್ನು ಮತದಾರರಾಗಿ ನೋಂದಾಯಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ ನಂತರ ಚುನಾವಣಾ ಆಯೋಗವು ಈಗಾಗಲೇ ಖೇರಾ ಅವರಿಗೆ ನೋಟಿಸ್ ನೀಡಿದೆ.ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಹೆಸರು ಕಾಣಿಸಿಕೊಂಡಿರುವುದಕ್ಕೆ ಆಯೋಗವೇ ಹೊಣೆ ಎಂದು ಖೇರಾ ತೀರುಗೇಟು ನೀಡಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net