ಮೋದಿ ಕಾರ್ಯಕ್ರಮ ಯಶಸ್ವಿಗಾಗಿ 108 ತೆಂಗಿನಕಾಯಿ ಗಣಹೋಮ ಪೂಜೆ ಮಾಡಿದ ಬಿಜೆಪಿ ಅಭ್ಯರ್ಥಿ

ropali naik
Published on

ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಮೇ 3ಕ್ಕೆ ಕ್ಷೇತ್ರದ ಅಂಕೋಲಾ ತಾಲೂಕಿನ ಹಟ್ಟಿಕೇರಿಗೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶಾಸಕಿ ರೂಪಾಲಿ ನಾಯ್ಕ ಪೂಜೆ ಕೈಗೊಂಡಿದ್ದಾರೆ.

ವಿಘ್ನ ವಿನಾಶಕ, ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಶಾಸಕಿಯೂ ಆಗಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ, ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದಂತೆ ಯಶಸ್ವಿಯಾಗಿ ನೆರವೇರಲೆಂದು ಗಣಹೋಮ ನಡೆಸಿದ್ದಾರೆ.

108 ತೆಂಗಿನಕಾಯಿ ಗಣಹೋಮ ಪೂಜೆ :

ವೀರಗಣಪತಿ ದೇಗುಲದಲ್ಲಿ ಪುತ್ರ ಪರ್ಭತ್, ಸೊಸೆ ರೇಖಾ ಅವರೊಂದಿಗೆ ಸೇರಿ 108 ಕಾಯಿಯ ಗಣಹೋಮ ನಡೆಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ಮಹಾಬಲೇಶ್ವರ ಹಾಗೂ ಮಧುಕೇಶ್ವರ ಭಟ್ ಅವರ ಅರ್ಚಕತ್ವದಲ್ಲಿ ಬೆಳಿಗ್ಗೆಯಿಂದ ಗಣಹೋಮ‌ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net