ಬುರ್ಖಾ ಧರಿಸಿ ಬರುವ ಮಹಿಳೆಯರಿಂದ ಬೋಗಸ್​ ಮತದಾನ; ಆರೋಪ ಮಾಡಿದ ಸಂಗೀತಾ ಚವ್ಹಾಣ್​​

Burqka
Published on

ಆಮ್ರೋಹಾ: ಕೆಲವು ಮಹಿಳೆಯರು ಬುರ್ಖಾ ಧರಿಸಿ ಬಂದು ಬೋಗಸ್​ ಮತದಾನ ಮಾಡುತ್ತಿದ್ದಾರೆ ಎಂದು ಉತ್ತರಪ್ರದೇಶದ ಆಮ್ರೋಹಾ ನಗರದ ನೌಗವಾನ್ ಸದಾತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತಾ ಚೌವ್ಹಾಣ್​ ಆರೋಪಿಸಿದ್ದಾರೆ.

ಈ ಕ್ಷೇತ್ರದ ಸಂಸದರಾಗಿದ್ದ ಚೇತನ್​ ಚೌಹಾಣ್​ ಅವರು ಆಗಸ್ಟ್​ನಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಸಂಗೀತಾ ಅವರು ಸ್ಪರ್ಧಿಸುತ್ತಿದ್ದಾರೆ.

ಕೆಲವು ಮಹಿಳೆಯರು ಬುರ್ಖಾ ಧರಿಸಿ ಬಂದು ಬೋಗಸ್​ ಮತದಾನ ಮಾಡುತ್ತಿದ್ದಾರೆ. ಅಧಿಕಾರಿಗಳೂ ಸುಮ್ಮನಿದ್ದಾರೆ. ಆದರೆ ಮತದಾನ ಮಾಡುವುದಕ್ಕೂ ಮೊದಲು ಬುರ್ಖಾ ತೆಗೆದು ಮುಖ ತೋರಿಸಬೇಕು. ಐಡಿ ಕಾರ್ಡ್​ ಮತ್ತು ಅವರ ಮುಖದ ಪರಿಶೀಲನೆ ನಡೆಯಬೇಕು ಎಂದು ಸಂಗೀತಾ ಆಗ್ರಹಿಸಿದ್ದಾರೆ.  ಆದರೆ ಸಂಗೀತಾ ಈ ಬಗ್ಗೆ ಯಾವುದೇ ಪುರಾವೆಯನ್ನೂ ಒದಗಿಸಿಲ್ಲ. ಎರಡು ದಿನಗಳ ಹಿಂದೆ ಸಂಸದ ಸಂಜೀವ್​ ಬಾಲ್ಯನ್ ಅವರು ಇದೇ ಆರೋಪವನ್ನು ಮಾಡಿದ್ದರು.

ಇಂದು ಉತ್ತರ ಪ್ರದೇಶದ ಏಳು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net