ದೇವೇಗೌಡರಿಗೆ ಬೆಂಬಲ ನೀಡಲು ಸಿದ್ಧವಾಗಿವೆ ಬಿಜೆಪಿ, ಕಾಂಗ್ರೆಸ್​

DEVEGOUDA
Published on

ಬೆಂಗಳೂರು: ರಾಜ್ಯದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಕಾಂಗ್ರೆಸ್​ನ ಒಬ್ಬರು ಹಾಗೂ ಬಿಜೆಪಿಯ ಇಬ್ಬರು ನಾಮಪತ್ರ ಸಲ್ಲಿಸುವುದು ಪಕ್ಕಾ ಆಗಿದ್ದರೂ ನಾಲ್ಕನೇ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿದರೆ ಅವರನ್ನು ಪರೋಕ್ಷವಾಗಿ ಬೆಂಬಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ತಂತ್ರಗಾರಿಕೆ ಹೆಣೆದಿವೆ.

ಹಿರಿಯ ರಾಜಕಾರಣಿ ಹಾಗೂ ಪ್ರಭಾವಿ ಒಕ್ಕಲಿಗ ನಾಯಕ ಗೌಡರನ್ನು ಉದ್ದೇಶಪೂರ್ವಕವಾಗಿ ಸೋಲಿಸಿದ ಅಪವಾದ ಹೊರಬಾರದೆನ್ನುವ ಉದ್ದೇಶದಿಂದ ಇಂಥದ್ದೊಂದು ಯೋಜನೆ ರೂಪುಗೊಂಡಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ರಾಜ್ಯ ಬಿಜೆಪಿ ತನ್ನ 2 ಸ್ಥಾನಗಳಿಗೆ ಮೂವರ ಹೆಸರು ಶಿಫಾರಸು ಮಾಡಿದ್ದು, ವರಿಷ್ಠರು ಸೋಮವಾರ ಅಂತಿಮ ಆಯ್ಕೆ ಪ್ರಕಟಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net