Beauty Tips: ಹಾಗಲಕಾಯಿ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಒಳ್ಳೆಯದು..

Bitter melon
Published on

ಬೆಂಗಳೂರು: ಹಾಗಲಕಾಯಿ ಎಷ್ಟೋ ಜನಕ್ಕೆ ಇಷ್ಟ ಆಗಲ್ಲ. ಹಾಗಲಕಾಯಿ ಅನೇಕ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳು ಅಡಗಿವೆ. ಇವು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯಕಾರಿಯಾಗಿದೆ. ಇದರಿಂದ ಆರೋಗ್ಯವಷ್ಟೇ ಅಲ್ಲ ತ್ವಚೆಯ ಸೌಂದರ್ಯವೂ ಇಮ್ಮಡಿಗೊಳ್ಳುತ್ತದೆ.

1) ಕೆಲವು ಜನರು ತಮ್ಮ ಮುಖದ ಮೇಲೆ ಕಪ್ಪು ಕಲೆಗಳಿಂದ ತೊಂದರೆಗೊಳಗಾಗುತ್ತಾರೆ. ಅಂತಹವರು ಹಾಗಲಕಾಯಿ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖದ ಮೇಲೆ ಹಚ್ಚಿ. ಒಣಗಿದ ನಂತರ, ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.

2)  ಹಾಗಲಕಾಯಿ ರಸವನ್ನು ಕರಿಬೇವಿನ ಎಲೆಯನ್ನು ಹಾಕಿ ಮಿಕ್ಸ್ ಮಾಡಿ. ಹತ್ತಿ ಅಥವಾ ಬೆರಳುಗಳ ಸಹಾಯದಿಂದ ಈ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಫೇಸ್ ಪ್ಯಾಕ್ನಂತೆ ಅನ್ವಯಿಸಿ. ಈ ಪ್ಯಾಕ್ ಚೆನ್ನಾಗಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ವಾರಕ್ಕೊಮ್ಮೆಯಾದರೂ ಹೀಗೆ ಮಾಡುವುದರಿಂದ ಮೊಡವೆ ಮತ್ತು ಕಲೆಗಳಿಲ್ಲದ ಸ್ವಚ್ಛ ತ್ವಚೆ ನಿಮ್ಮದಾಗುವುದು.

3) ಹಾಗಲಕಾಯಿ ಮಿಕ್ಸ್ ಮಾಡಿ ಪೇಸ್ಟ್​​ನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿದ್ರೆ, ಮುಖ ಸ್ವಚ್ಚವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net