

ನವದೆಹಲಿ : ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಸೈಂಟಿಸ್ಟ್ ಬಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಗ್ರಾಜುಯೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಜಿಎಟಿಇ) ನಲ್ಲಿ ಗಳಿಸಿದ ಅಂಕಗಳು ಹಾಗೂ ಆಗಸ್ಟ್ 3 ರಿಂದ 21 ರವರೆಗೆ ಬಿಐಎಸ್ ನಡೆಸಿದ ಸಂದರ್ಶನದ ಆಧಾರದ ಮೇಲೆ ಸೈಂಟಿಸ್ಟ್ ಬಿ ಹುದ್ದೆ ನೇಮಕಾತಿಗೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಲಾಗಿದೆ.
ಈ ಹುದ್ದೆಗೆ ಮಾಸಿಕ ವೇತನ (ಬೇಸಿಕ್) 56,100/- ರೂ. (10 ನೇ ಲೆವೆಲ್, 7 ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ ಪ್ರಕಾರ) ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಇ-ಮೇಲ್ ವಿಳಾಸಕ್ಕೆ ನೇಮಕಾತಿ ಪತ್ರ ಕಳುಹಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗೆ https://bis.gov.in ನೋಡಬಹುದು.