ಮುಸ್ಲಿಂ ಸಮುದಾಯಕ್ಕೆ ಬಿರಿಯಾನಿ, ಜೈನರು, ಕ್ರೈಸ್ತರಿಗೆ ಉಪ್ಪಿನಕಾಯಿ;ನಿಖಿಲ್ ಕುಮಾರಸ್ವಾಮಿ ಲೇವಡಿ|Biryani for the Muslim

nikhil kumarswamy
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಆಯವ್ಯಯದಲ್ಲಿ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ನೀಡಿದ್ದಾರೆ. ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ(Biryani for the Muslim community, pickles for Jains and Christians) ಎಂದು ಹೇಳಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು.

ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಓಲೈಕೆ ಮಾಡುವುದಕ್ಕೂ ಒಂದು ಮಿತಿ ಇದೆ. ಇದನ್ನು ಸಿದ್ದರಾಮಯ್ಯ ಅವರ ಹದಿನಾರನೇ ಬಜೆಟ್‌ಎಂದು ಎಲ್ಲರೂ ಹೇಳಿದ್ದಾರೆ. ಅದನ್ನು ದಾಖಲೆ ಎಂದು ಹೊಗಳುತ್ತಿದ್ದಾರೆ. ಆದರೆ, ಮುಸ್ಲಿಮರಿಗೆ ಹದಿನಾರು ಕಾರ್ಯಕ್ರಮಗಳನ್ನು ಕೊಟ್ಟು ತಮ್ಮ ನಿರ್ದಿಷ್ಟ ಕಾರ್ಯಸೂಚಿ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಜವನ್ನು ಹೇಗೆ ಒಡೆಯಬೇಕು ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಈ ಬಜೆಟ್‌ನಲ್ಲಿ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಿದ್ದಾರೆ. ಬಹು ಸಂಖ್ಯಾತ ಸಮುದಾಯಗಳನ್ನು ತುಚ್ಛೀಕರಣ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಖಾರವಾಗಿ ಪ್ರಶ್ನಿಸಿದರು.

4.09 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ 1.15 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ಗದಾಪ್ರಹಾರ ನಡೆಸಿದರು.

ಈ ಬಜೆಟ್ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಜನರಿಗೆ ಇನ್ನು ಸ್ವಲ್ಪ ದಿನದಲ್ಲೇ ಸತ್ಯ ಏನೆಂದು ಗೊತ್ತಾಗುತ್ತದೆ. ಬೆಂಗಳೂರು ನಗರದ ಸುರಂಗ ಯೋಜನೆಗೆ 40,000 ಕೋಟಿ ರೂ.ಕೊಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಿಂದ ಹಣ ಕೊಡುತ್ತಾರೆ? ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಇದು ನಿಜಕ್ಕೂ ಆಗುತ್ತಾ? ಅಥವಾ ಕನಸಾಗಿಯೇ ಉಳಿಯುತ್ತಾ? ಎಂದು ಅನುಮಾನ ವ್ಯಕ್ತಪಡಿಸಿದರು.

ಉರ್ದು ಶಾಲೆ ಉದ್ಧಾರ ಮಾಡುವುದಕ್ಕೆ ಹಣ ಇದೆ. ಆದರೆ, ವಿವಿಗಳಿಗೆ ಕೊಡಲು ದುಡ್ಡಿಲ್ಲ. ವಕ್ಫ್ ಕಟ್ಟಡಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ ಎಲ್ಲ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿವಿಗಳಿಗೆ ಕೊಡಲು ಇವರಿಗೆ ಕೈ ಬರಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net