

ನವದೆಹಲಿ: ಕರೊನಾ ಸಂಕಷ್ಟ ಹಾಗೂ ಲಾಕ್ಡೌನ್ ಪರಿಣಾಮದಿಂದಾಗಿ ಹಲವರಿಗೆ ತ್ಮ ಊಟವನ್ನು ತಾವೇ ಬೇಯಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ, ಇದರ ಸಹವಾಸವೇ ಬೇಡ ಎನ್ನುವವರು ಆನ್ಲೈನ್ ಫುಡ್ ಡೆಲಿವರಿಗೆ ಮೊರೆ ಹೋಗಬೇಕಾಯಿತು.
ಅಂತೆಯೇ, ಆನ್ಲೈನ್ನಲ್ಲಿ ಊಟ ತರಿಸುವವರ ಅಚ್ಚುಮೆಚ್ಚಿನ ಖಾದ್ಯ ಯಾವುದು ಗೊತ್ತೆ? ಬಿರಿಯಾನಿ..! ಸ್ವಿಗ್ಗಿ ಪ್ರಕಟಿಸುವ ವರದಿ ಪ್ರಕಾರ ಗ್ರಾಹಕರು ಒಟ್ಟಾರೆ 5.5 ಲಕ್ಷ ಬಾರಿ ರೆಸ್ಟೊರಂಟ್ಗಳಿಂದ ಬಿರಿಯಾನಿ ತರಿಸಿಕೊಂಡಿದ್ದಾರೆ.
ಕರೊನಾ ಸಂಕಷ್ಟ ಹಾಗೂ ಲಾಕ್ಡೌನ್ ಮೊದಲಾದವುಗಳಿಂದ ಹೊಸ ಬದಲಾವಣೆಗಳು ಕಂಡು ಬಂದಿರಬಹುದು. ಆದರೆ, ಊಟದ ಮೇಲಿನ ಪ್ರೀತಿ ಅದರಲ್ಲೂ ಬಿರಿಯಾನಿ ಮನಸೋಲುವ ಪ್ರವೃತ್ತಿ ಮಾತ್ರ ಬದಲಾಗಿಲ್ಲ ಎನ್ನುತ್ತದೆ ಸಂಸ್ಥೆ. ಸತತ ನಾಲ್ಕು ವರ್ಷಗಳಿಂದ ಬಿರಿಯಾನಿಯೇ ಅಗ್ರಸ್ಥಾನದಲ್ಲಿದೆ.
ಇನ್ನು, ಎರಡನೇ ಸ್ಥಾನದಲ್ಲಿರೊದು ಬಟರ್ ನಾನ್ ನಂತರದ ಸ್ಥಾನ ಮಸಾಲೆ ದೋಸೆಗೆ ಒಲಿದಿದೆ. 3,35, 185 ಬಟರ್ ನಾನ್ನಗಳಿಗೆ ಆರ್ಡರ್ ಬಂದಿದ್ದರೆ, ಮಸಾಲೆ ದೋಸೆಗೆ ಮನಸೋತವರು 3,31423 ಜನ.
ಇನ್ನು ಸಿಹಿ ಖಾದ್ಯಗಳ ವಿಚಾರದಲ್ಲಿ ಹೇಳುವುದಾದರೆ, ಲಾವಾ ಕೇಕ್ 1.29 ಲಕ್ಷ, ಗುಲಾಬ್ ಜಾಮೂನ್ 84,558, ಬಟರ್ಸ್ಕಾಚ್ ಮೌಸ್ಸಿ ಕೇಕ್ 27,317 ಹೆಚ್ಚು ಗ್ರಾಹಕರನ್ನು ಪಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರತಿದಿನ ರಾತ್ರಿ ಎಂಟು ಗಂಟೆಗೆಲ್ಲ ಸರಾಸರಿ 65,000 ಊಟಗಳ ಆರ್ಡರ್ ಸ್ವೀಕೃತವಾಗುತ್ತಿತ್ತು ಎಂದು ಸ್ವಿಗ್ಗಿ ತಿಳಿಸಿದೆ.