More

    ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..!

    ಬೆಂಗಳೂರು: ಸದ್ಯ ದೇಶದಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿರುವ ಪರಿ ನೋಡಿದರೆ ಜನರಿಗೆ ಭಯವಾಗದೇ ಇರದು. ಇಂಥ ಭಯವನ್ನೇ ಬಂಡವಾಳ ಮಾಡಿಕೊಂಡು ವಂಚಿಸುವವರು ಹುಟ್ಟಿಕೊಂಡಿದ್ದಾರೆ.

    ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ, ನಿಶ್ಚಿಂತೆಯಿಂದ ಇರಿ; ಮನೆಗೇ ಬಂದು ಸ್ಯಾಂಪಲ್​ ಕಲೆಕ್ಟ್​ ಮಾಡಿಕೊಳ್ತೇವೆ ಎಂದು ಆನ್​ಲೈನ್​ ಜಾಹೀರಾತು ನೋಡಿದ ಹಲವರು ಮೋಸ ಹೋಗಿದ್ದಾರೆ.

    ಇದನ್ನೂ ಓದಿ; ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​? 

    ಜಾಹೀರಾತಿನಲ್ಲಿ ನೀಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ಹಲವರು, ಮನೆಗೆ ಬಂದು ಸ್ಯಾಂಪಲ್ ಕಲೆಕ್ಟ್​ ಮಾಡಿಕೊಳ್ಳಲು ಹೇಳಿದ್ದಾರೆ. ಅದರಂತೆ ವ್ಯಕ್ತಿಯೊಬ್ಬ ಬಂದು ಗಂಟಲು ದ್ರವ ಮಾದರಿ ಸಂಗ್ರಹಿಸಿಕೊಂಡಿದ್ದಾನೆ. ಪ್ರತಿಯೊಬ್ಬರಿಂದಲೂ 5,500 ರೂ. ಪಡೆದುಕೊಂಡಿದ್ದಾನೆ. ಬಳಿಕ ಯಾವುದೇ ವರದಿ ನೀಡದೇ ವಂಚಿಸಿದ್ದಾನೆ.

    ಸಿಟಿ ಸ್ಕ್ಯಾನ್​ ಟೆಕ್ನಿಷಿಯನ್​ ಆಗಿದ್ದ ಶಿವರಾತ್ರಿ ವಿಷ್ಣು ಎಂಬಾತನ ಕೃತ್ಯವಿದು. ಹೈಧರಾಬಾದ್​ನ ನಿಜಾಮ್​ಪೇಟ್​ ನಿವಾಸಿಯಾಗಿದ್ದು, ಸದ್ಯ ಈತನ ವಿರುದ್ಧ 10ಕ್ಕೂ ಅಧಿಕ ಜನರು ದೂರು ದಾಖಲಿಸಿದ್ದಾರೆ. ಶುಕ್ರವಾರ ಸೈಬರಾಬಾದ್​ ಪೊಲೀಸರು ಈತನನ್ನು ಬಂಧಿಸಿದ್ದಾರೆ.
    ಸುಲಭವಾಗಿ ಹಣ ಸಂಪಾದಿಸಲು ಈ ವಂಚನೆಯ ಮಾರ್ಗ ಹಿಡಿದಿದ್ದಾಗಿ ಆತ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ.

    https://www.vijayavani.net/he-used-matrimony-sites-to-cheat-women/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts