

ಮುಂಬೈ: ಸಾಮಾನ್ಯವಾಗಿ ಜನ್ಮದಿನದಂದು ಬಹುತೇಕರು ಕೇಕ್ (birthday gift) ಕತ್ತರಿಸಿ ಸಂಭ್ರಮ ಆಚರಣೆ ಮಾಡಿಕೊಳ್ಳುವ ಪದ್ಧತಿ ನಮ್ಮಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಸ್ನೇಹಿತರು ಮತ್ತು ಕುಟುಂಬಸ್ಥರ ಜತೆ ಸೇರಿ, ಜನ್ಮದಿನವನ್ನು ಸಂಭ್ರಮಿಸೋ ಅನೇಕರು ತಮ್ಮ ಆಪ್ತ ವಲಯದಿಂದ ವಿಶೇಷವಾದ, ಬಗೆ ಬಗೆಯ ಉಡುಗೊರೆಯನ್ನು ಸ್ವೀಕರಿಸುತ್ತಾರೆ. ಕೆಲವರು ಒಂದಷ್ಟು ದುಬಾರಿ ಗಿಫ್ಟ್ಗಳನ್ನು ಪಡೆದುಕೊಂಡರೆ, ಇನ್ನೂ ಕೆಲವರು ಏನ್ನನ್ನು ಪಡೆಯದೆ, ಹುಟ್ಟುಹಬ್ಬ ಮುಗಿಸಿಕೊಳ್ಳುತ್ತಾರೆ.
ತಮ್ಮ ಸ್ನೇಹಿತರ ಹುಟ್ಟುಹಬ್ಬವನ್ನು ವಿಶೇಷವಾಗಿ ಹಾಗೂ ವಿಭಿನ್ನವಾಗಿ ಆಚರಿಸಬೇಕು ಎಂಬುದು ಹಲವರ ಆಶಯ. ಇದಕ್ಕಾಗಿ ಅವರ ಜನ್ಮದಿನ ಇರುವ ಒಂದು ತಿಂಗಳು ಮುಂಚಿತವಾಗಿಯೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ತಮ್ಮ ಪ್ರೀತಿ-ಪಾತ್ರರ ಗಮನಕ್ಕೆ ಬಾರದೆ, ಅವರಿಗೆ ಸರ್ಪ್ರೈಸ್ ಆಗಿ ಹುಟ್ಟುಹಬ್ಬದ ಉಡುಗೊರೆ ಕೊಡುವ ಸ್ನೇಹಿತರು ಅಥವಾ ಕುಟುಂಬಸ್ಥರು, ಆ ಆಚರಣೆ ಅವರ ನೆನಪಿನಲ್ಲಿ ಗಟ್ಟಿಯಾಗಿ ಉಳಿಯಬೇಕು ಎಂದು ಬಯಸುತ್ತಾರೆ. ಇಂತಹ ವಿಶೇಷ ಜನ್ಮದಿನ ಸಂಭ್ರಮದ ಸಾಲಿಗೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.
ತಮ್ಮ ಸ್ನೇಹಿತೆಯ ಜನ್ಮದಿನಕ್ಕೆ ಕೇಕ್ ಮುಂದಿಟ್ಟ ಸ್ನೇಹಿತರು, ಆಕೆಯನ್ನು ಕೇಕ್ ಕತ್ತರಿಸುವಂತೆ ಶುಭಾಶಯ ಹೇಳುತ್ತಾರೆ. ಈ ವೇಳೆ ತನ್ನ ಉಡುಗೊರೆ ಸಿಹಿಯಾದ ಕೇಕ್ನೊಳಗಿದೆ ಎಂದು ತಿಳಿಯದ ಯುವತಿ, ಅದನ್ನು ಕತ್ತರಿಸಲು ಮುಂದಾಗುತ್ತಾಳೆ. ಮೊದಲು ಕೇಕ್ ಮೇಲಿರುವ ಹ್ಯಾಂಡಲ್ ಎತ್ತುವ ಯುವತಿಗೆ 500 ರೂ. ನೋಟು ಕಾಣಸಿಗುತ್ತದೆ. ಇದನ್ನು ಕಂಡು ಅಚ್ಚರಿಗೊಳಗಾದ ಆಕೆ, ಇನ್ನಷ್ಟು ತೆಗೆಯುತ್ತ ಹೋದಂತೆ, ಮತ್ತಷ್ಟು ನೋಟುಗಳು ಕೈಗೆ ಸಿಗುತ್ತವೆ. ಇದರಿಂದ ಭಾರೀ ಆಶ್ಚರ್ಯಕ್ಕೆ ಒಳಗಾದ ಯುವತಿಯ ವಿಡಿಯೋ ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ,(ಏಜೆನ್ಸೀಸ್).