ಮಧ್ಯಾಹ್ನದ ಬಿಸಿಊಟ ವಿತರಿಸಿ ಹುಟ್ಟುಹಬ್ಬ ಆಚರಣೆ

Oplus_16908288
ಸಿಂಧುವಳ್ಳಿ ಗೇಟ್ ಬಳಿ ಇರುವ ಕರುಣಾಲಯ ಆಸ್ಪತ್ರೆಯಲ್ಲಿ ಗೂಡ್ಸ್ ಶೆಡ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು ವಿತರಿಸಲಾಯಿತು.
Published on

ನಂಜನಗೂಡು: ಪಟ್ಟಣದ ಗೂಡ್ಸ್ ಶೆಡ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಿಂಧುವಳ್ಳಿ ಗೇಟ್ ಬಳಿ ಊಟಿ ರಸ್ತೆಯಲ್ಲಿರುವ ಕರುಣಾಲಯ ಆಸ್ಪತ್ರೆಯಲ್ಲಿ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಅಭಿಮಾನಿಗಳು ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.

ಚಂದ್ರು ಅವರು ಮಾತನಾಡಿ, ನಮ್ಮ ಸಂಘದ ಕಾರ್ಮಿಕರು, ಅಭಿಮಾನಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರು ದಾಖಲಾಗಿದ್ದು, ಅದ್ದೂರಿಯಾಗಿ ಆಚರಣೆ ಮಾಡುವ ಬದಲು ಒಂದು ಸಮಯದ ಊಟ ಹಾಗೂ ಹಣ್ಣು ಹಂಪಲು ವಿತರಿಸಿ ಅವರೊಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸುವಂತೆ ತಿಳಿಸಿದರು. ಅವರೊಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ತುಂಬ ಖುಷಿ ತಂದಿದೆ ಎಂದರು.

ದಾಸ್‌ಪ್ರಕಾಶ್, ಬೈರ, ಸಿದ್ದಪ್ಪ, ತಮಿಮ್, ಶಂಕರ್, ಬಸಪ್ಪ, ಮುತ್ತು, ಕಿಟ್ಟಿ, ಪಾಪ, ರಮೇಶ್, ಸ್ವಾಮಿ, ನಾಗು, ಶ್ರೀಕಂಠಮೂರ್ತಿ, ನಾಗರಾಜ ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net