

ಕೆ.ಆರ್.ನಗರ: ಪಟ್ಟಣದ ಮಧುವನಹಳ್ಳಿ ಬಡಾವಣೆಯ ಜವರೇಗೌಡರ ಮನೆಯ ಹಸು ಬುಧವಾರ ಅವಳಿ ಕರುಗಳಿಗೆ ಜನ್ಮ ನೀಡಿದೆ.
ಈ ನಾಟಿ ಹಸು ಈಗಾಗಲೇ ಎರಡು ಬಾರಿ ತಲಾ ಒಂದೊಂದು ಕರುಗಳಿಗೆ ಜನ್ಮ ನೀಡಿತ್ತು. 3ನೇ ಬಾರಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಕರುವಿಗೆ ಜನ್ಮ ನೀಡಿದೆ. ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಜವರೇಗೌಡರ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಅವಳಿ ಕರುಗಳನ್ನು ನೋಡಲು ಸ್ಥಳೀಯರು ಭೇಟಿ ನೀಡುತ್ತಿದ್ದಾರೆ.