

ಬೆಂಗಳೂರು: ಕನ್ನಡದಲ್ಲಿ 'ಬೀರ್ಬಲ್' ಟ್ರಯೋಲಜಿ ಸಿನಿಮಾ ಮೂಲಕ ಕ್ರೈಮ್-ಥ್ರಿಲ್ಲರ್ ಕಥಾಹಂದರವನ್ನು ಸಿನಿಪ್ರೇಕ್ಷಕರ ಮುಂದಿಟ್ಟಿದ್ದ ನಿರ್ದೇಶಕ, ನಟ ಶ್ರೀನಿ, ಇದೀಗ ಚಿತ್ರದ ಮುಂದುವರಿದ ಭಾಗವನ್ನು (Birbal 2) ತೆರೆಗೆ ತರುವಲ್ಲಿ ಸಖತ್ ಬಿಜಿಯಾಗಿದ್ದಾರೆ. 'ಕಾಂತಾರ' ಬೆಡಗಿ ರುಕ್ಮಿಣಿ ವಸಂತ್ ಅವರನ್ನು ಬೀರ್ಬಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ ಶ್ರೀನಿ, ಸದ್ಯ ಸ್ವೀಕ್ವೆಲ್ನಲ್ಲಿ ಸ್ಟಾರ್ಗಳ ಸಮಾಗಮಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ ಅನಿಸುತ್ತಿದೆ.
ಈ ವರ್ಷದ ಜುಲೈನಲ್ಲಿ 'ಬೀರ್ಬಲ್ 2' ಚಿತ್ರೀಕರಣ ಪ್ರಾರಂಭಿಸಿದ ಶ್ರೀನಿ, ಶೂಟಿಂಗ್ನ ಕೊನೆಯ ಹಂತಕ್ಕೆ ತಲುಪಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ನಲ್ಲಿ ಮೂಡಿಬರಲಿರುವ ಚಿತ್ರವನ್ನು ಶ್ರೀನಿ ಅವರೇ ನಟಿಸಿ, ನಿರ್ದೇಶಿಸಿದ್ದಾರೆ. ಲಾಯರ್ ಪಾತ್ರದಲ್ಲಿ ಕೇಸ್ ಬಗೆಹರಿಸಲಿರುವ ಶ್ರೀನಿ, ಬಹುಭಾಷಾ ತಾರೆಯನ್ನು ಮತ್ತೇ ಸ್ಯಾಂಡಲ್ವುಡ್ಗೆ ಕರೆತರುತ್ತಿರುವುದು ಚಿತ್ರದ ದೊಡ್ಡ ಹೈಲೈಟ್ ಎಂದೇ ಹೇಳಬಹುದು.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ನಟಿ ಖುಷ್ಬೂ ಸುಂದರ್, ಕನ್ನಡದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ 'ರಣಧೀರ', 'ಯುದ್ಧಕಾಂಡ' ಮತ್ತು 'ಅಂಜದ ಗಂಡು' ಸೇರಿದಂತೆ ಒಂದಷ್ಟು ಸೂಪರ್ಹಿಟ್ ಚಿತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ಚಿತ್ರರಂಗದಿಂದ ದೂರ ಉಳಿದಿರುವ ಸ್ಟಾರ್ ನಟಿಯನ್ನು ಮತ್ತೊಮ್ಮೆ ತಮ್ಮ ಸಿನಿಮಾ ಮೂಲಕ ಕನ್ನಡಕ್ಕೆ ಕರೆತರುತ್ತಿರುವ ಶ್ರೀನಿ, ನಟಿಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.
ಇದರೊಟ್ಟಿಗೆ 'ರಾಮ ಶಾಮ ಭಾಮ', 'ಗಾಳಿಪಟ' ಖ್ಯಾತಿಯ ನಟಿ ಡೈಸಿ ಬೋಪಣ್ಣ ಕೂಡ 'ಬೀರ್ಬಲ್ 2' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡ್ತಿದ್ದಾರೆ. ಬಹುನಿರೀಕ್ಷಿತ ಸಿನಿಮಾದಲ್ಲಿ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).