

Omelette : ಬಾಲಿವುಡ್ ಸೆಲೆಬ್ರೆಟಿಗಳು ಸದಾ ಒಂದಲ್ಲೊಂದು ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ ಸದ್ದು ಮಾಡ್ತಾನೆ ಇರ್ತಾರೆ. ಇದೀಗ ಅಂತದ್ದೇ ಸುದ್ದಿಯಲ್ಲಿ ನಟಿ ಬಿಪಾಶಾ ಬಸು ಇದ್ದಾರೆ. ಕೇವಲ ಒಂದು ಆಮ್ಲೆಟ್ಗಾಗಿ ಬರೊಬ್ಬರಿ ಮೂರು ತಾಸು ಶೂಟಿಂಗ್ ನಿಲ್ಲಿಸಿದ್ದರು ಎಂದು ಬಾಲಿವುಡ್ನ ನಿರ್ಮಾಪಕ ಮಿಕಾ ಸಿಂಗ್ ಹೇಳಿದ್ದಾರೆ.
2020 ರಲ್ಲಿ ಡೇಂಜರಸ್ ಚಿತ್ರೀಕರಣದ ಸಮಯದಲ್ಲಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಅವರೊಂದಿಗಿನ ಅನುಭವದ ಬಗ್ಗೆ ಮಿಕಾ ಸಿಂಗ್ ಧ್ವನಿ ಎತ್ತಿದ್ದಾರೆ. ಈ ಕುರಿತು ಶುಭಂಕರ್ ಮಿಶ್ರಾ ನಡೆಸಿಕೊಡುತ್ತಿರುವ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
ಇದು ಅಪಾಯಕಾರಿ ಅನುಭವವಾಗಿತ್ತು. ಈ ಚಿತ್ರದಲ್ಲಿ ಬಿಪಾಶಾ ಬಸು ಮತ್ತು ಅವರ ಪತಿ ಕರಣ್ ಸಿಂಗ್ ಗ್ರೋವರ್ ನಟಿಸಿದ್ದರು. ನಟಿ ಬಿಪಾಶಾ ಶೂಟಿಂಗ್ ಸೆಟ್ನಲ್ಲಿದ್ದರು. ಆದರೆ, ನಾನು ಬೇರೆ ಕಡೆ ಇದ್ದೆ. ಅಲ್ಲದೆ, ನಟ ಕರಣ್ ಸಿಂಗ್ ಗ್ರೋವರ್ ಕಾಲಿನ ನೋವಿನಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಮಯದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನನಗೆ ಸೆಟ್ನಿಂದ ಕಾಲ್(ಕರೆ) ಬಂತು. ಏನಾಗಿದೆ ಎಂದು ಕೇಳ್ದೆ? ಬಿಪಾಶಾ ಶೂಟಿಂಗ್ಗೆ ಬರುತ್ತಿಲ್ಲನ ಎಂದರು. ಬಳಿಕ ಬಿಪಾಶಾ ಹತ್ತಿರ ಮಾತನಾಡಿದೆ. (ಈ ಕರೆ ಬರುವ ಮುನ್ನವೇ ಶೂಟಿಂಗ್ ಸೆಟ್ಗೆ ನನ್ನ ವೈಯಕ್ತಿಕ ಅಡುಗೆದಾರನನ್ನು ಕಳುಹಿಸಿದ್ದೆ ಅಲ್ಲದೆ, ಅವನಿಗೆ ಹೇಳಿದ್ದೆ ಅಲ್ಲಿ ಏನು ಸಮಸ್ಯೆ ಆಗಬಾರದೆಂದು?) ಏನಾಯ್ತು ಬಿಪಾಶಾ? ಎಂದೆ.. ಅದಕ್ಕೆ ಉತ್ತರಿಸಿದ ಬಿಪಾಶಾ, ಇಲ್ಲಿ ಏನಾಗ್ದಿದೆ ಮಿಕಾ? ಇದು ಪೂರ ಕಳಪೆ ನಿರ್ಮಾಣ? ಅದುದ್ದಾರೂ ಏನು? ಎಂದು ಕೇಳ್ದೆ ಅದಕ್ಕೆನ ಉತ್ತರಿಸಿದ ಬಸು, ಆಮ್ಲೆಟ್ ಎಲ್ಲಿ ಎಂದಳು? ಇದರಿಂದ ಅದಾಗಲೇ ಮೂರು ತಾಸು ಶೂಟಿಂಗ್ ನಿಲ್ಸಿದ್ದಳು ಎಂದು ನಿರ್ಮಾಪಕ ಮಿಕಾ ಸಿಂಗ್ ಬಹಿರಂಗಪಡಿಸಿದ್ದಾನೆ.
"ನಾನು ನಿರ್ಮಾಣಕ್ಕೆ ಇಷ್ಟೆಲ್ಲಾ ಹಣ ಖರ್ಚು ಮಾಡಿ ಇಲ್ಲಿ ಕುಳಿತಿದ್ದೇನೆ. ಇತ್ತ ಕರಣ್ ತನ್ನ ಕಾಲು ಮುರಿದುಕೊಂಡಿದ್ದಾನೆ. ನನಗೆ ಅವರೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಕೆಲವು ಜನರು ಏಕೆ ಯಶಸ್ವಿಯಾಗುವುದಿಲ್ಲ ಎಂದು ನೀವು ಆಶ್ಚರ್ಯ ಪಡುತ್ತೀರಿ ಎಂದು ಬಿಪಾಶಾ ವಿರುದ್ಧ ಪರೋಕ್ಷ ಕಿಡಿಕಾಡಿದ್ದಾರೆ''.(ಏಜೆನ್ಸೀಸ್)