ಕ್ಯಾಲಿಫೋರ್ನಿಯಾದಲ್ಲಿ ಸಿನಿಮಾ ರೀತಿಯಲ್ಲಿ ಬಿಂದಿ ಜುವೆಲರ್ಸ್ ಸ್ಟೋರ್​​ನಲ್ಲಿ ಹಾಡು ಹಗಲೇ ಭಾರಿ ದರೋಡೆ

Bindi jewelers store in California like a movie is a huge robbery
Published on

-ವರದಿ ಬೆಂಕಿ ಬಸಣ್ಣ ನ್ಯೂಯಾರ್ಕ್

ಅಮೇರಿಕಾ: ಕ್ಯಾಲಿಫೋರ್ನಿಯ ರಾಜ್ಯದಲ್ಲಿರುವ ಫ್ರೀಮೊಂಟ್ ನಗರದಲ್ಲಿ ಸೀನಮಿಯ ರೀತಿಯಲ್ಲಿ ಹಾಡು ಹಗಲೇ ದೇಸಿ ಜನರಿಗೆ ಬಹಳ ಜನಪ್ರಿಯವಾದ ಪ್ರಖ್ಯಾತ ಬಿಂದಿ ಜ್ಯುವೆಲರಿ ಸ್ಟೋರ್ ನಲ್ಲಿ ಇದೇ ಮೇ 29, ಬುಧವಾರ ಮಧ್ಯಾಹ್ನ 1 ಗಂಟೆಗೆ ಭಾರಿ ದರೋಡೆಯಾಗಿದೆ.

ಬಂದೂಕು ಹಿಡಿದು ಮುಖವನ್ನು ಮುಚ್ಚಿಕೊಂಡು ನುಗ್ಗಿದ 17 ಜನ ದರೋಡೆಕೋರರು ಗ್ಲಾಸ್ ಡೋರ್​​ಳನ್ನು ಮುರಿದು ಬಿಂದಿ ಜ್ಯುವೆಲರ್ಸ್ ಸ್ಟೋರ್ ಒಳಗೆ ನುಗ್ಗಿ ಅಂಗಡಿಯ ಸಿಬ್ಬಂದಿಯನ್ನು ಗನ್​​ಗಳಿಂದ ಹೆದರಿಸಿ ಅಲ್ಲಿಯ ವಸ್ತುಗಳನ್ನು ಧ್ವಂಸಗೊಳಿಸಿ ಕೇವಲ ಎರಡು ನಿಮಿಷಗಳಲ್ಲಿ ಅಪಾರ ಪ್ರಮಾಣದ ಕೊಟ್ಟಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ವಜ್ರ ಮುಂತಾದ ಬೆಲೆ ಬಾಳುವ ಆಭರಣಗಳನ್ನು ದೋಚಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಅದೃಷ್ಟವಶಾತ್ ಯಾವ ಜೀವಹಾನಿಯೂ ಸಂಭವಿಸಿಲ್ಲ. ಇದು ಅಮೆರಿಕದಲ್ಲಿರುವ ಭಾರತೀಯರನ್ನು ಬೆಚ್ಚಿ ಬೆಳೆಸಿ ಆತಂಕಕ್ಕೆ ಒಳಪಡಿಸಿದೆ. ಅಮೇರಿಕದಲ್ಲಿ ಅಕ್ರಮ ವಲಸೆಗಾರರ ಪರ ಉದಾರ ಮೃದು ನಿಲುವು ಹೊಂದಿರುವ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಅಧ್ಯಕ್ಷರ ಅಧಿಕಾರ ಅವಧಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಣ ದುಬ್ಬರ ಹೆಚ್ಚಾಗಿದ್ದು ಕ್ಯಾಲಿಫೋರ್ನಿಯಾದ ದೊಡ್ಡ ನಗರಗಳ ಡೌನ್ ಟೌನ್​​ಗಳಲ್ಲಿ ಅಪರಾಧ, ಡ್ರಗ್ಸ್, ಕ್ರಿಮಿನಲ್ ಮತ್ತು ದರೋಡೆ  ಪ್ರಕರಣಗಳು ಹೆಚ್ಚುತ್ತಿವೆ.

ಮೆಕ್ಸಿಕೋ ಗಡಿಯಿಂದ ಅಮೆರಿಕದೊಳಗೆ ನುಸುಳಿ ಬರುತ್ತಿರುವ ದಾಖಲೆ ರಹಿತ ಅಕ್ರಮ ವಲಸಗಾರರು ಹೆಚ್ಚುತ್ತಿರುವುದು ಸಹ ಡ್ರಗ್ಸ್, ದರೋಡೆ ಮತ್ತು ಅಪರಾಧಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net