

ಬ್ರೆಜಿಲ್: ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅಮೆರಿಕನ್ ಬಿಲಿಯನೇರ್ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಬ್ರಸೆಲ್ಸ್‌ನ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನ ಕರಿಸಲಾಗುತ್ತದೆ. ಬಿಲ್ ಗೇಟ್ಸ್ ಅವರು ಬ್ರಸೆಲ್ಸ್‌ನ ಒಳಚರಂಡಿ ವ್ಯವಸ್ಥೆಯ ನಗರದ ತ್ಯಾಜ್ಯ ವ್ಯವಸ್ಥೆಯ ಸಂಕೀರ್ಣ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಜ್ಞಾನಿಗಳೊಂದಿಗೆ ಭೇಟಿಯಾಗಿರುವುದನ್ನು ನಾವು ವಿಡಿಯೋದಲ್ಲಿ ನೋಡ ಬಹುದಾಗಿದೆ.
“ಈ ವರ್ಷ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಬ್ರೆಜಿಲ್‌ನ ಒಳಚರಂಡಿಗೆ ಇಳಿದು ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು ಪರಿಶೋಧಿಸಲು ಪ್ರಯತ್ನಿಸಿದೆ. ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯನೀರಿನ ನಿರ್ವಹಣೆಯ ಪಾತ್ರವನ್ನು ಅನ್ವೇಷಿಸಿದೆ' ಎಂದು ಬಿಲ್ ಗೇಟ್ಸ್ ಬರೆದುಕೊಂಡಿದ್ದಾರೆ.
ಬ್ರೆಜಿಲ್‌ನ ಒಳಚರಂಡಿ ವ್ಯವಸ್ಥೆಯ ಕುರಿತಂತೆ ಅನೇಕ ವಿಷಯಗಳನ್ನು ತಿಳಿದುಕೊಂಡೆ. ನಗರದ ತ್ಯಾಜ್ಯ ನೀರಿನ ಸಂಸ್ಕರಣೆ ಇತಿಹಾಸದ ಬಗ್ಗೆಯೂ ತಿಳಿದುಕೊಂಡೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
18ನೇ ಶತಮಾನದಲ್ಲಿ ಚರಂಡಿ ನೀರನ್ನು ನೇರವಾಗಿ ಸೆನ್ನೆ ನದಿಗೆ ಹರಿಸಲಾಗಿತ್ತು. ಅದು ಭಯಾನಕ ಕಾಲರಾ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಯಿತು. ಇಂದು, 200 ಮೈಲಿಗಳ ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳ ಜಾಲವು ನಗರದ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿವೆ.