ಬಿಲ್​ ಗೇಟ್ಸ್​ ಪುತ್ರಿಯ​ ವಿವಾಹ: ಈಜಿಪ್ಟಿನ ಕುದುರೆ ಸವಾರನ ಕೈಹಿಡಿದ ಜೆನ್ನಿಫರ್​

bill
Published on

ನ್ಯೂಯಾರ್ಕ್: ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾದ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ರ ಹಿರಿಯ ಪುತ್ರಿ ಜೆನ್ನಿಫರ್​ ಗೇಟ್ಸ್​ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನ್ಯೂಯಾರ್ಕ್​ನ ವೆಸ್ಟ್​ಚೆಸ್ಟರ್ ಕೌಂಟಿಯಲ್ಲಿ ನಡೆದ ಆಪ್ತರನ್ನೊಳಗೊಂಡ ಸಮಾರಂಭದಲ್ಲಿ, ಜೆನ್ನಿಫರ್​, ಈಜಿಪ್ಟಿನ ಕುದುರೆ ಸವಾರಿ ಆಟಗಾರ 30 ವರ್ಷದ ನಯೇಲ್ ನಸ್ಸರ್​ ಕೈಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಿಲ್​ ಗೇಟ್ಸ್​ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಒಟ್ಟಿಗೆ ಜೆನ್ನಿಫರ್​ರನ್ನು ವಿವಾಹ ವೇದಿಕೆಗೆ ಕರೆದುಕೊಂಡುಹೋದರು. ಸಮಾರಂಭದಲ್ಲಿ ಕುಟುಂಬಗಳ ಸದಸ್ಯರೂ ಸೇರಿದಂತೆ ಸುಮಾರು 300 ಜನರು ಭಾಗವಹಿಸಿದ್ದರು ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. ಆದರೆ ಈ ವಿವಾಹದ ಯಾವುದೇ ಚಿತ್ರಗಳು ಇನ್ನೂ ಹೊರಬಿದ್ದಿಲ್ಲ.

25 ವರ್ಷ ವಯಸ್ಸಿನ ಜೆನ್ನಿಫರ್​ ಗೇಟ್ಸ್​ ಬಾಯ್​ ಫ್ರೆಂಡ್​ ನಯೇಲ್ ನಸ್ಸರ್​ರೊಂದಿಗಿನ ಎಂಗೇಜ್​ಮೆಂಟನ್ನು 2020ರ ಜನವರಿಯಲ್ಲಿ ಘೋಷಿಸಿದ್ದರು. ನಿನ್ನೆಯ ವಿವಾಹದ ಸಂದರ್ಭದಲ್ಲಿ ಪಾರಂಪರಿಕ ಫಾದರ್​-ಡಾಟರ್​ ಡ್ಯಾನ್ಸ್​ನಲ್ಲಿ ಜೆನ್ನಿಫರ್ ಮತ್ತು ಬಿಲ್​ ಗೇಟ್ಸ್​ ಎಲ್ಟನ್​ ಜಾನ್​ರ 'ಕ್ಯಾನ್ ಯು ಫೀಲ್ ದ ಲವ್ ಟುನೈಟ್'​ ಹಾಡಿಗೆ ಹೆಜ್ಜೆ ಹಾಕಿದರು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net