

ಟೊರೊಂಟೋ: ಮಹಿಳೆಯರ ಈಜುಡುಗೆ, ತುಂಡುಡುಗೆ, ಬೀಚ್ವೇರ್ ಎಂದೆಲ್ಲ ಕರೆಯಿಸಿಕೊಳ್ಳುತ್ತಿದ್ದ ಬಿಕಿನಿ ಈಗ ಪುರುಷರ ಸಾಮ್ರಾಜ್ಯಕ್ಕೂ ಕಾಲಿರಿಸಿದೆ.
ಟೊರೊಂಟೋದ ಇಬ್ಬರು ಯುವಕರು ಪುರುಷರಿಗಾಗಿ ಬಿಕಿನಿ ಮಾರಾಟ ಮಾಡುವ ಕಂಪನಿಯನ್ನು ಆರಂಭಿಸಿದ್ದಾರೆ. ಇದಕ್ಕವರು ಬ್ರೊಕಿನಿ ಎಂದು ಹೆಸರಿಟ್ಟಿದ್ದಾರೆ.
ಚಾಡ್ ಸಾಸ್ಕೋ ಹಾಗೂ ಟೇಲರ್ ಫೀಲ್ಡ್ ಈ ಕಂಪನಿಯ ರೂವಾರಿಗಳು. ಇಟ್ಸ್ ಬಿಕಿನಿ ಫಾರ್ ಮೆನ್ ಎಂಬ ಟ್ಯಾಗ್ಲೈನ್ ಕೂಡ ಇದಕ್ಕಿದೆ. ಸೋ ಆಫ್ ಯೂವರ್ ಪ್ಯಾಕೇಜ್ ಇನ್ ಸ್ಟೈಲ್ ಆ್ಯಂಡ್ ಡಿಸಪಾಯಿಂಟ್ ಯೂವರ್ ಪೇರೇಂಟ್ಸ್ ಎಂದೂ ಇವರು ಹೇಳುತ್ತಾರೆ.
ಸದ್ಯ ಇದರ ಬೆಲೆಯನ್ನು 45 ಡಾಲರ್ (ಅಂದಾಜು 3,375 ರೂ. ) ನಿಗದಿಪಡಿಸಲಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಉಡುಪು ಒಂದೇ ಕಡೆ ತೋಳನ್ನು ಹೊಂದಿದೆ.
ಬ್ಯಾಚುಲರ್ ಪಾರ್ಟಿಗಳಿಗೆ ಹೋದಾ ಪುರುಷರಿಗಾಗಿ ಸ್ನಾನದ ಉಡುಪುಗಳಿಲ್ಲ ಎಂಬುದು ಅರಿವಿಗೆ ಬಂತು. ನಂತರ ಕುಸ್ತಿಯಲ್ಲಿ ಪುರುಷರು ಧರಿಸುವ ಉಡುಪು ಗಮನಿಸಿದೆವು. ಇದನ್ನು ಸ್ನಾನದ ಉಡುಪಾಗಿ ಬದಲಾಯಿಸಬಹುದು ಎನಿಸಿತು ಎಂದು ಸಾಸ್ಕೋ ಹೇಳಿದ್ದಾರೆ.
ಈ ಉಡುಪು ತಯಾರಿಕೆಗೆ ಉತ್ಪಾದಕರನ್ನು ಸಂಪರ್ಕಿಸಿದಾಗ ಅವರು 250 ಬ್ರೊಕಿನಿಗಳನ್ನು ತಯಾರಿಸಿ ನೀಡಿದ್ದಾರೆ. ಸದ್ಯ ಇದಕ್ಕಾಗಿ 5,000 ಡಾಲರ್ಗಳನ್ನು ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.